ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಬಾಲೆಹೊಸೂರು ದಿಂಗಾಲೇಶ್ವರ ಮಠದ ಜಾತ್ರೆ

Mainashree
Updated On : 20 Apr 2014, 10:41 am

ಲಕ್ಷ್ಮೇಶ್ವರ: ಸಮೀಪದ ಬಾಲೆಹೊಸೂರು ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಏ. 20ರ ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ. ಜಾತ್ರೆಗಾಗಿ ಬೃಹತ್ ಪ್ರಮಾಣದ ದಾಸೋಹ ಮನೆ ಸಿದ್ಧವಾಗಿದೆ. ಮೇ  23, 24, 25ರಂದು ಮಠದ ನೂತನ ಕಟ್ಟಡಗಳ ಲೋಕಾರ್ಪಣೆ ನೆರವೇರಲಿದೆ.
ಏ. 20ರಿಂದ ಒಂದು ತಿಂಗಳು ಶರಣ ಚರಿತಾಮೃತ ಪ್ರವಚನ ನಿತ್ಯ ಸಂಜೆ 6ರಿಂದ ಜಮಖಂಡಿ ಓಲೇಮಠದ ಡಾ. ಚನ್ನಬಸವ ಶ್ರೀಗಳಿಂದ ನಡೆಯಲಿದೆ. ಏ. 20ರಂದು ಮಹಾನುಭಾವ ಮಾದರ ಚನ್ನಯ್ಯ ಕುರಿತು ಪ್ರವಚನ ಜರುಗಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಅಧ್ಯಕ್ಷತೆ ವಹಿಸುವರು. ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಶ್ವರ ಶಿವಾಚಾರ್ಯ ಶ್ರೀ ನೇತೃತ್ವ ವಹಿಸುವರು. ಮೊದಲ ದಿನದ ಪ್ರವಚನ ಕಾರ್ಯಕ್ರಮವನ್ನು ಬಿ.ಸಿ.ಎನ್. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಸಿ. ನೆಲವಿಗಿ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಸಿ.ಎಸ್. ಶಿವಳ್ಳಿ, ಶಂಕ್ರಣ್ಣ ಮುನವಳ್ಳಿ, ಜಿ.ಎಂ. ಚಿಕ್ಕಮಠ ಮುಂತಾದವರು ಆಗಮಿಸುವರು. ಹುಬ್ಬಳ್ಳಿ ಅಶೋಕ ಪಾಟೀಲ, ದೇವಗಿರಿ ಉಳವೆಪ್ಪ ಕಡ್ಲಿ, ರಾಣಿಬೆನ್ನೂರು ಬಸವರಾಜ ಮಳಿಮಠ ಅವರನ್ನು ಸನ್ಮಾನಿಸಲಾಗುವದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement