ವಿದ್ಯಾರ್ಥಿಗಳು ನೈಪುಣ್ಯ ಬೆಳೆಸಿಕೊಳ್ಳಿ
ಗದಗ: ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ತನ್ನು ಉಜ್ವಲಗೊಳಿಸಿಕೊಳ್ಳುವುದಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಸಾಮಾಜಿಕ ನೈಪುಣ್ಯ ಬೆಳೆಸಿಕೊಳ್ಳಬೇಕು. ತರಬೇತಿಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.
ಉನ್ನತ ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ಹೆಚ್ಚಿಸುವ ಮತ್ತು ಮೌಲಿಕ ಶಿಕ್ಷಣ ನೀಡುವ ಸಲುವಾಗಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ ನೈಪುಣ್ಯನಿಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಪೂರಕವಾಗುವಂತಹ ದೈಹಿಕ ಮತ್ತು ಮಾನಸಿಕ ಅಂಶಗಳು, ಗುರಿ ಹೊಂದುವಿಕೆ ಮತ್ತು ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಭಾರತೀಯ ನೀತಿ-ಮೌಲ್ಯಗಳು ಹಾಗೂ ಉತ್ತಮ ನಾಗರಿಕ ನಡವಳಿಕೆಗಳನ್ನು ಅರಿತು ಕೊಳ್ಳಬೇಕು ಎಂದರು. ನೈಪುಣ್ಯನಿಧಿ ಕಾರ್ಯಕ್ರಮದ ಸಮನ್ವಯಾಧಿಕಾರಿ ಡಾ. ಉಮೇಶ ಅರಹುಣಸಿ ಮಾತನಾಡಿ, ಆಧುನಿಕ ಲೋಕದಲ್ಲಿ ವಿದ್ಯಾರ್ಥಿಗಳು ಹೊಂದಿರುವ ನೈಪುಣ್ಯದ ಆಧಾರದ ಮೇಲೆ ಉದ್ಯೋಗ ಅವಕಾಶಗಳನ್ನು ನೀಡಲಾಗುತ್ತಿದೆ. ಪರಿಪೂರ್ಣವಾದ ಸಾಮಾಜಿಕ ಹಾಗೂ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಂಡರೆ ಭಾವಿ ಜೀವನ ಯಶ ಕಾಣುತ್ತದೆ ಎಂದರು.
ರಾಜ್ಯಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕ ಪ್ರೊ. ನಾಗರಾಜ ಹಾವಿನಾಳ ಮತ್ತು ದೈಹಿಕ ಶಿಕ್ಷಣ ಬೋಧಕ ಬಸವರಾಜ ಅಂಬಿಗೇರ, ಗ್ಲೋಬೆರೆನಾ ಕಂಪನಿಯ ಪ್ರತಿನಿಧಿ ಸಯ್ಯದ ಅಹಮದ್ ಹಾಗೂ ಕವಿತಾ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗುಮಗೋಳಮಠ, ಚಂದ್ರಪ್ಪ ಎಚ್.ಎಸ್., ಆರ್.ಪಿ. ನದಾಫ, ಫಕೀರಪ್ಪ ಆನಿ, ಡಾ. ಮಾನಪ್ಪ ಹೊನ್ನಕಾಂಬಳೆ, ಸವಿತಾ ಪಾಟೀಲ, ರಂಜನಾ ಭಂಡಾರೆ, ಜಯಶ್ರೀ ಮುತಗಾರ, ಅಣ್ಣಪ್ಪ ರೊಟ್ಟಿಗವಾಡ, ಮುತ್ತಪ್ಪ ಬದ್ನಿಕಾಯಿ ಪಾಲ್ಗೊಂಡಿದ್ದರು. ಬಸವರಾಜ ಗೂರನವರ ಕಾರ್ಯಕ್ರಮ ನಿರೂಪಿಸಿದರು. ಜಂದೂಬಿ ದೊಡಮನಿ ವಂದಿಸಿದರು.