ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ಕನ ವಚನಗಳಲ್ಲಿ ಉದಾತ್ತ ಧ್ಯೇಯ

Lingaraj Badiger
Updated On : 22 Apr 2014, 11:25 am

ಗದಗ: ಅಕ್ಕಮಹಾದೇವಿಯ ವಚನ ಸಾಹಿತ್ಯದಲ್ಲಿ ಮಾನವ ಬದುಕಿನ ಏಳ್ಗೆಗೆ ಬೇಕಾದ ಉನ್ನತ ವಿಚಾರಗಳಿವೆ, ಉದಾತ್ತ ಧ್ಯೇಯಗಳಿವೆ. ಅವು ಸಾಮಾಜಿಕ ಚಿಂತನೆಗೆ ಹಿಡಿದ ಕೈಗನ್ನಡಿ ಎಂದು ಗದುಗಿನ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ನಿರ್ಮಲಾ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಸ್ಥಳೀಯ ಅಕ್ಕನ ಬಳಗದಲ್ಲಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಈಚೆಗೆ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವಕಾಲಿಕ ಮೌಲ್ಯಗಳಿಗೆ ಅಧ್ಯಾತ್ಮ ಶಿಖರವಾಗಿ ಅಕ್ಕಮಹಾದೇವಿ ಸ್ತ್ರೀ ಕುಲದ ಅಕ್ಕಳಾಗಿದ್ದಾಳೆ. ಅಕ್ಕ ಸ್ವಾವಲಂಬನೆಯ ಸಂಕೇತ, ಜ್ಞಾನದ ನಿಧಿ, ವಿನಯದ ರೂಪ, ಅಭಿವ್ಯಕ್ತಿಸುವ ದಿಟ್ಟತನ, ಅಧ್ಯಾತ್ಮದ ಪರಿಪಕ್ವತೆ ಆಗಿದ್ದಾಳೆ. ಅಕ್ಕನ ವಚನಗಳಲ್ಲಿ ನಿಷ್ಠುರತೆ, ಸ್ಪಷ್ಟ ನಿಖರತೆ ಮತ್ತು ಸೂಕ್ಷ್ಮತೆಯ ವಿಚಾರಗಳಿವೆ. ಆಧ್ಯಾತ್ಮಿಕ ಸಂವೇದನೆಗಳು ಪ್ರಕೃತಿ ಒಲವು, ಭಕ್ತಿ ಮೇಳೈಸಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಮಾತನಾಡಿ, ಮಹಿಳೆಯರು ಧಾರ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಂಡು ಕುಟುಂಬ ಮತ್ತು ಸಮಾಜದ ಪ್ರಗತಿಗೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸನ್ಮಾನಿತರಾದ ಶಿವಲೀಲಾ ಕುರಡಗಿ, ಸುಮಂಗಲಾ ಹೊಸಮನಿ ಹಾಗೂ ಸುಗ್ಗಲಾ ಯಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಸುಶ್ಮಿತಾ ವಸ್ತ್ರದ, ಸ್ನೇಹಾ ಪಾಟೀಲ, ಸಾದ್ವಿ ಯಳಮಲಿ, ಸೃಷ್ಟಿ ಕೊಟ್ಟೂರಶೆಟ್ಟರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಸ್ತೂರಿ ಹಿರೇಗೌಡ್ರ ಸ್ವಾಗತಿಸಿದರು. ಶಾಂತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೀನಾಕ್ಷಿ ಸಜ್ಜನರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement