ಅಕ್ರಮ ಮರಳು ಸಾಗಾಟ: ಏಳು ಲಾರಿ ವಶ
ನವಲಗುಂದ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಏಳು ಲಾರಿಗಳನ್ನ್ನು ಸೋಮವಾರ ಬೆಳಗಿನ ಜಾವ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಮರಳಸಿದ್ದಪ್ಪ ಮಠದ, ಮಂಜುನಾಥ ಬೆಂಡಿಗೇರಿ, ದಾವಲಸಾಬ ಕಾಲಣ್ಣವರ, ಕರಬಸಪ್ಪ ಮುಲಿಮನಿ, ಮಂಜುನಾಥ ದೇಸಾಯಿ, ಮಂಜುನಾಥ ಅವಾರಿ ಹಾಗೂ ಸದಾನಂದ ಹಂಚಿನಮನಿ ಅವರುಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಧಾರವಾಡದ ಹಿರಿಯ ಭೂ ವಿಜ್ಞಾನ ಗಣಿ ಮತ್ತು ಭೂವಿಜ್ಞಾನ ಖನಿಜ ವಿಭಾಗಕ್ಕೆ ಪೊಲೀಸರು ದೂರು ನೀಡಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಶಿರಸಂಗಿಯಿಂದ ಅಕ್ರಮವಾಗಿ ನವಲಗುಂದಕ್ಕೆ ಮರಳ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ತಾಲೂಕಿನ ಅಳಗವಾಡಿ ಹಾಗೂ ಯಮನೂರ ಬಳಿ ಮರಳು ತುಂಬಿಕೊಂಡು ಹೋಗುತ್ತಿದ್ದ ಲಾರಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
--