ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಕ್ಷ್ಮೇಶ್ವರ ಬಿಸಿಎನ್ ಶಾಲೆಯಿಂದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

Lingaraj Badiger
Updated On : 22 Apr 2014, 11:35 am

ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಶಾಲೆಯು ಮಕ್ಕಳಿಗೆ ರಜೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿಯು  ಶಾಲೆಯಲ್ಲಿ ಏ. 21ರಿಂದ ಮೇ 13ರವರೆಗೆ ನಡೆಯಲಿದೆ ಎಂದು ಬಿಸಿಎನ್ ಸಂಸ್ಥೆಯ ನಿರ್ದೇಶಕ ಡಾ. ರೇವತಿ ನೆಲುವಿಗಿ ಹೇಳಿದರು.
ಪ್ರತಿದಿನ 9.30 ರಿಂದ ಮಧ್ಯಾಹ್ನ 1.30 ರ ವರೆಗೆ 4ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪಠ್ಯವನ್ನು ಹೊರತು ಪಡಿಸಿ ಯೋಗ, ಸಂಗೀತ, ನೃತ್ಯ, ಬರಹ ಕಲೆ, ಕಾರ್ಯಕ್ರಮ ನಿರ್ವಹಣೆ, ಕರಕುಶಲ ತರಬೇತಿ, ಭಾಷಣ ಕಲೆ, ಡ್ರಾಯಿಂಗ್, ಇಂಗ್ಲೀಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್ ಹೀಗೆ ಹಲವು ರೀತಿಯ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೇಸಿಗೆ ಶಿಬಿರದ ಉಪನ್ಯಾಸಕಿ ಜ್ಯೋತಿ ಬೆಂಗಳೂರ್, ನಾಗರಾಜ ಕುಲಕರ್ಣಿ, ಸುಮಲತಾ, ರಾಜೇಶ್ವರಿ ಕೋಷ್ಟಿ, ಎ.ಎಸ್. ವಾಲಿಶೆಟ್ಟರ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement