ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

25ರಂದು ಪಾಕ್ಷಿಕ ಸಭೆ

Rashmi Kasaragodu
Updated On : 23 Apr 2014, 12:20 pm

ಗದಗ: ಗದಗ-ಬೆಟಗೇರಿ ಪ್ರೋಬಸ್ ಕ್ಲಬ್ನ ಪಾಕ್ಷಿಕ ಸಭೆ ಏ. 25ರಂದು ಸಂಜೆ 6.30ಕ್ಕೆ ಗದಗ ಹುಡ್ಕೋ ಕಾಲೋನಿಯ ಬಸವೇಶ್ವರ ಶಾಲಾ ಆವರಣದಲ್ಲಿರುವ ಯಳಂದೂರು ಬಸವಲಿಂಗ ಶ್ರೀಗಳ ಸ್ಮಾರಕ ಯೋಗ ಪಾಠ ಶಾಲೆಯಲ್ಲಿ ನಡೆಯಲಿದೆ.
ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಆಗಮಿಸಿ ಮಹಿಳೆ ಮಾನವತೆಯ ಶಿಲ್ಪಿ ಕುರಿತು ಮಾತನಾಡುವರು. ಪ್ರೋಬಸ್ ಕ್ಲಬ್ ಅಧ್ಯಕ್ಷ ಬಸವರಾಜ ಗಿಡ್ನಂದಿ ಅಧ್ಯಕ್ಷತೆ ವಹಿಸುವರು. ದಾಸೋಹ ಸೇವೆಯನ್ನು ಟಿ.ವಿ. ಕಾಳೆ ವಹಿಸುವರು ಎಂದು ಕಾರ್ಯದರ್ಶಿ ಈ.ಜಿ. ಚೋಳಿನ ಹಾಗೂ ಕ್ಲಬ್ನ ವಾರ್ತಾಧಿಕಾರಿ ಉಳವಪ್ಪ ಹೊಂಬಳ ತಿಳಿಸಿದ್ದಾರೆ.
ಇಂದಿನಿಂದ ವಿದ್ಯುತ್ ವ್ಯತ್ಯಯ
ನರಗುಂದ: ನರಗುಂದದ 110 ಕೆವಿ ಟ್ರಾನ್ಸಫಾರ್ಮರ್ನ ತುರ್ತು ನಿರ್ವಹಣೆ ಕೈಗೊಳ್ಳಲಾಗುತ್ತಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಏ. 23ರಿಂದ 25ರ ವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಪ್ರಕಟಣೆ ಗಮನಿಸಿ ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಕಬಡ್ಡಿ ಪಂದ್ಯಾವಳಿ
ನರಗುಂದ: ತಾಲೂಕಿನ ಕುರ್ಲಗೇರಿ ಗ್ರಾಮದ ಖಲೀಫ ರೆಹಮಾನ ಶರಣರ 45ನೇ ವರ್ಷದ ಉರೂಸಿನ ಪ್ರಯುಕ್ತ ಗ್ರಾಮದ ಯುನಿವರ್ಸಲ್ ಸ್ಪೋಟ್ಸ್ ಕ್ಲಬ್, ರೈತ ಸೇನಾ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಏ. 24ರಂದು ಸಂಜೆ 4ಕ್ಕೆ ರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು.  10 ಸಾವಿರ, ದ್ವಿತೀಯ ಬಹುಮಾನ ರು.  5 ಸಾವಿರ ಹಾಗೂ ತೃತೀಯ ಬಹುಮಾನ ರು.  2500 ಇದೆ. ಆಸಕ್ತ ತಂಡಗಳು ಭಾಗವಹಿಸಲು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement