ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ಕೊರತೆ: ಟಾಪ್ ಸರ್ವೀಸ್

Rashmi Kasaragodu
Updated On : 23 Apr 2014, 12:21 pm

ಡಿ.ಜಿ. ಮೋಮಿನ್
ಗಜೇಂದ್ರಗಡ: ಪಟ್ಟಣದಿಂದ ಸುತ್ತಲಿನ ಗ್ರಾಮಗಳಿಗೆ ಸರಿಯಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದ್ದರಿಂದ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಜೀವದ ಹಂಗುತೊರೆದು ಟಾಪ್ ಸರ್ವೀಸ್ ಪ್ರಯಾಸದ ಪ್ರಯಾಣ ಮಾಡುವುದು ಇಲ್ಲಿ ಸಾಮಾನ್ಯ. ಸಂಚಾರಿ ನಿಯಮ ಗಾಳಿಗೆ ತೂರಿದರೂ ಯಾರೂ ಕೇಳುವರಿಲ್ಲದಂತಾಗಿದೆ.
ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣಕ್ಕೆ ನಿತ್ಯ ಸುತ್ತಲಿನ ಗ್ರಾಮಗಳ ಸಹಸ್ರಾರು ಜನ ಬರುತ್ತಾರೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ನಿತ್ಯ ಸಂಚಾರಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದ್ದರಿಂದ ತೀವ್ರ ತೊಂದರೆ ಅನುಭವಿಸುವುದು ತಪ್ಪಿಸಲು ಇನ್ನೂವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಪಟ್ಟಣವು ತಾಲೂಕು ಕೇಂದ್ರ ಘೋಷಣೆಗೆ ಅಣಿಯಾಗುತ್ತಿದ್ದು, ಜನಸಂಖ್ಯೆ ಬೆಳೆದಂತೆ ಸಾರಿಗೆ ಸೌಕರ್ಯ ಕೊರತೆ ಇದೆ. ಹೀಗಾಗಿ ಗ್ರಾಮೀಣ ಜನತೆ ಖಾಸಗಿ ವಾಹನಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ.
ಪಟ್ಟಣದಲ್ಲಿ ವಾಹನಗಳ ದಟ್ಟಣೆ ಮಿತಿಮೀರಿದೆ. ಗ್ರಾಮೀಣ ಜನರು ಜೀವವನ್ನು ಕೈಯಲ್ಲಿ ಹಿಡಿದು ಟೆಂಪೋ, ಟ್ರ್ಯಾಕ್ಸ್, ಟಂಟಂ ವಾಹನಗಳಲ್ಲಿ ಸಂಚರಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ದೊರಕಿಸಿಕೊಡುವವರು ಯಾರು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. 45 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗಜೇಂದ್ರಗಡ ಎರಡು ಲಕ್ಷ ಜನಸಂಖ್ಯೆಯ ಪಕ್ಕದ ಗ್ರಾಮಿಣ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಪಟ್ಟಣ ಪ್ರದೇಶ ಕೃಷಿ ಉತ್ಪನ್ನ ಉಪಮಾರುಕಟ್ಟೆ, ಮಾರಾಟ, ಜಾನುವಾರು ಮಾರಾಟ, ಜವಳಿ ವ್ಯಾಪಾರ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ. ಕರ್ನಾಟಕ, ಆಂಧ್ರಪ್ರದೇಶ ರಾಜ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ಗಜೇಂದ್ರಗಡ ಮಾರ್ಗವಾಗಿ ಹಾಯ್ದು ಹೋಗುತ್ತದೆ.
ವಾಣಿಜ್ಯ ಬೆಳೆಯಲ್ಲಿ ಖ್ಯಾತಿ: ಗಜೇಂದ್ರಗಡ, ಸುತ್ತಲಿನ ಗ್ರಾಮಗಳು ವಾಣಿಜ್ಯ ಬೆಳೆ ಬೆಳೆಯುವಲ್ಲಿ ದಾಖಲೆ ಸ್ಥಾಪಿಸಿದೆ. ಗಜೇಂದ್ರಗಡ ಶೇಂಗಾ ಎಣ್ಣೆ, ನೇಕಾರಿಕೆಗೆ ಖ್ಯಾತಿ ತಂದಿದೆ. ಇಲಕಲ್ ಸೀರೆಗಳನ್ನು ಇಲ್ಲಿಯೆ ಉತ್ಪಾದಿಸಲಾಗುತ್ತಿದೆ. ಆಯುರ್ವೇದಿಕ್ ವೈದಕೀಯ ಕಾಲೇಜು, ಪದವಿ ಕಾಲೇಜುಗಳು ಶಾಲೆ-ಪ್ರೌಢಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ.
ತಾಲೂಕು ಕೇಂದ್ರದಲ್ಲಿ ಇರುವಂತಹ ಉಪನೋಂದಣಿ ಕಚೇರಿ ತೆರೆಯಲಾಗಿದೆ. ಇಷ್ಟೆಲ್ಲ ಸೌಲಭ್ಯಗಳು ಇದ್ದಾಗ್ಯೂ ಸುತ್ತಲಿನ ಗ್ರಾಮಗಳ ಜನತೆಗೆ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ವಾಕರ ಸಾರಿಗೆ ಸಂಸ್ಥೆ ವಿಫಲವಾಗಿರುವುದು ದುರದೃಷ್ಟಕರ. ಇನ್ನಾದರೂ ಎಚ್ಚೆತ್ತು ಗ್ರಾಮೀಣ ಸಾರಿಗೆ ಆರಂಭಿಸಿ ಸುಗಮ ಸಂಚಾರಕ್ಕೆ ಮುಂದಾಗಬೇಕೆನ್ನುವುದು ಪ್ರಜ್ಞಾವಂತ ನಾಗರಿಕರ ಅಂಬೋಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement