ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೃತ್ತಿ ಯಶಸ್ಸಿಗೆ ಸಹಕಾರವೇ ಪ್ರೇರಣೆ

Rashmi Kasaragodu
Updated On : 23 Apr 2014, 12:22 pm

ಗದಗ: ಸುದೀರ್ಘ 32 ವರ್ಷಗಳ ಕಾಲ ವೈದ್ಯಕೀಯ, ಅಧ್ಯಾಪಕ ವೃತ್ತಿ ಜೀವನದಲ್ಲಿ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಅಭಿವೃದ್ಧಿಗಾಗಿ ಶ್ರಮಿಸುವುದರಲ್ಲಿ ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಮತ್ತು ಪ್ರೇರಣೆ ಸ್ಮರಣೀಯ ಎಂದು ಡಾ.ವಿ.ಎಂ. ಸಜ್ಜನ ಹೇಳಿದರು.
ಅವರು ಈಚೆಗೆ ನಗರದ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಯೋನಿವೃತ್ತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಸ್ಥೆಯ ಚೇರ್ಮನ್ ಎಸ್.ಬಿ. ಸಂಶಿ ಮಾತನಾಡಿ, ತಮ್ಮ ಹೆಸರಿಗೆ ತಕ್ಕಂತೆ ಸರಳ ಸಜ್ಜನ ಹಾಗೂ ಸರ್ವ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಡಾ. ಸಜ್ಜನ ಯಾವಾಗಲೂ ಮೇಲುಗೈ ಎಂದರು.
ಡಾ.ಜಿ.ಬಿ. ಪಾಟೀಲ, ಕಾಲೇಜಿನ ಸಹೋದ್ಯೋಗಿಗಳಾದ ಡಾ.ಎಸ್.ಎಸ್. ಅವ್ವಣ್ಣಿ, ಎಸ್.ಬಿ. ಗೋವಿಂದಪ್ಪನವರ, ಜಿ.ಎಸ್. ಹಿರೇಮಠ, ಸುವರ್ಣ ನಿಡಗುಂದಿ, ಜಯಶ್ರೀ ವಿರಕ್ತಮಠ, ಜಿ.ಎಸ್. ಜುಕ್ತಿಹಿರೇಮಠ, ಯು.ವಿ. ಪುರದ ಪ್ರಾಸ್ತಾವಿಕ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಹುಬ್ಬಳ್ಳಿ, ಶಿವಾನಂದ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ. ಸಂಕನೂರ ಮುಂತಾದವರು ಉಪಸ್ಥಿತರಿದ್ದರು. ಡಾ.ಆರ್.ಆರ್. ಜೋಶಿ ಸ್ವಾಗತಿಸಿದರು. ಡಾ.ಬಿ.ಜಿ. ಸ್ವಾಮಿ ನಿರೂಪಿಸಿದರು. ಡಾ. ಕಮಾರ ಕಂಠಿಮಠ ವಂದಿಸಿದರು.


ಪುಸ್ತಕಗಳು ಬುದ್ಧಿಶಕ್ತಿ ಹೆಚ್ಚಿಸುತ್ತವೆ
ಗದಗ: ಪುಸ್ತಕಗಳು ವಿದ್ಯಾರ್ಥಿಗಳ ಬುದ್ಧಿಶಕ್ತಿ ಹೆಚ್ಚಿಸುವ ಜತೆಗೆ ಮಕ್ಕಳಲ್ಲಿ ಬೌದ್ಧಿಕ ಕೌಶಲ್ಯವನ್ನುಂಟು ಮಾಡುತ್ತವೆ ಎಂದು ಮುಖ್ಯೋಪಾಧ್ಯಾಯ ಪಿ.ಎಲ್. ರಾಠೋಡ ಹೇಳಿದರು.
ಅವರು ಸೋಮವಾರ ನಗರದ ಶಹಪುರಪೇಟೆಯ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಸರ್ವಧರ್ಮ ಹಿತೈಷಿ ಸೇವಾ ಸಂಘದಿಂದ ನಡೆದ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಅಗಸ್ತ್ಯ ಫೌಂಡೇಶನ್ ಗದಗ ಘಟಕದ ಶಿಕ್ಷಕ ಸಂತೋಷಕುಮಾರ, ಕಳಕಪ್ಪ, ಯಲ್ಲಪ್ಪ ಹಾಗೂ ಮಲ್ಲಿಕಾರ್ಜುನ ಆಲೂರ ವಿಜ್ಞಾನ ಪುಸ್ತಕಗಳ ಕೌತುಕಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಆಯೋಜಕ ಸರ್ವಧರ್ಮ ಹಿತೈಷಿ ಸೇವಾ ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ಗೂಳರೆಡ್ಡಿ ಮಾತನಾಡಿದರು. ಮಕ್ಕಳಿಗೆ ನೀತಿಬೋಧಕ ಪುಸ್ತಕ ವಿತರಿಸಲಾಯಿತು. ರಂಜಿತಾ ಪ್ರಾರ್ಥಿಸಿದರು. ಐ.ಟಿ. ಹೊಸಮನಿ ಸ್ವಾಗತಿಸಿದರು. ಸಂತೋಷಕುಮಾರ ನಿರೂಪಿಸಿದರು. ಚೆನ್ನಾರೆಡ್ಡಿ ಗೂಳರೆಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement