ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೆಣ್ಣು ಜಾಗೃತಳಾಗುವುದು ಅವಶ್ಯ: ಶಕುಂತಲಾ

Rashmi Kasaragodu
Updated On : 23 Apr 2014, 12:22 pm

ಗದಗ: ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ. ಆದಾಗ್ಯೂ ಕೂಡ ಪುರುಷ ಪ್ರದಾನ ಸಮಾಜವೇ ಉಳಿದಿದೆ. ಆದ್ದರಿಂದ ಹೆಣ್ಣು ಮಕ್ಕಳು ಜಾಗೃತರಾಗುವುದು ಅವಶ್ಯವಾಗಿದೆ ಎಂದು ಶಕುಂತಲಾ ಸಿಂಧೂರ ಹೇಳಿದರು.
ಅವರು ಈಚೆಗೆ ನಗರದ ಹಾಲಕೇರಿಮಠ ಆನಂದಾಶ್ರಮದಲ್ಲಿ ನಡೆದ 106 ನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಣು ಮಕ್ಕಳು ರಾಜಕೀಯ ಮಿಸಲಾತಿಯನ್ನು ನಂಬದೇ ಸ್ವಪ್ರಯತ್ನದಿಂದ ಮುಂದೆ ಬರಲು ಪ್ರಯತ್ನಿಸಬೇಕು. ಹೆಚ್ಚು ಶಕ್ತಿಯಾಗಿ ಸಮಾಜದ ಪ್ರತಿಯೊಂದು ರಂಗಗಳಲ್ಲಿ ದುಡಿದು ತಾವು ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ತೊರಿಸುತ್ತಿದ್ದಾಳೆ ಆದರೆ ಇನ್ನೂ ಹೆಚ್ಚಿನ ಪ್ರಯತ್ನ ಅಗತ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ದೇವರು ಆಶೀರ್ವಚನ ನೀಡಿ, ಸಮಾಜದಲ್ಲಿ ಎಲ್ಲರೂ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳುವುದನ್ನು ಕಲಿತರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಆ ನಿಟ್ಟಿನಲ್ಲಿ ದೇವರು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದರು. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದವರನ್ನು ಸನ್ಮಾನಿಸಲಾಯಿತು. ದಿವ್ಯಾ ಹಾಗೂ ಭಾವನಾ ಪಟ್ಟಣಶೆಟ್ಟಿ ಅವರಿಂದ ವಚನ ಗಾಯನ ಜರುಗಿತು. ಎ.ಕೆ. ನಾಶಿ, ಸರ್ವಮಂಗಲಾ ನಾಶಿ, ರಾಜಶೇಖರ ಶಿರೂರ, ಎಸ್.ಡಿ. ಕಮತರ ಇದ್ದರು. ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ಶಂಕರಣ್ಣ ಗೋದಿ ಸ್ವಾಗತಿಸಿದರು. ಎಸ್.ಸಿ. ಕುಂದಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಚ್. ದೇಶಪ್ಪನವರ ನಿರ್ವಹಿಸಿದರು. ಎಸ್.ವೈ. ಭಾವಿಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement