ವಿದ್ಯಾರ್ಥಿಗಳುಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಿ: ಡಾ. ಬನ್ನೂರ
ಕನ್ನಡಪ್ರಭ ವಾರ್ತೆ, ಗದಗ, ಏ. 23
ಆದರ್ಶ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ವಿದ್ಯಾರ್ಥಿ ಜೀವನ ಬಂಗಾರದಂತಾಗುತ್ತದೆ. ಉತ್ತಮ ಸಂಸ್ಕೃತಿ ಆದರ್ಶ ಪಡೆದುಕೊಳ್ಳಬೇಕು ಎಂದು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಡಾ. ಬಿ.ಸಿ. ಬನ್ನೂರ ಹೇಳಿದರು.
ಅವರು ಬುಧವಾರ ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್ಲ ಪದವಿ ಅಂತಿಮ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಚಂಚಲ ಮನಸ್ಕರಾಗಬಾರದು. ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಬಡತನದಲ್ಲಿ ಸಾಯುವುದು ತಪ್ಪು. ಪಾಲಕರ ಸಂಕಲ್ಪದಂತೆ ಜ್ಞಾನಾರ್ಜನೆ ವೃದ್ಧಿಕೊಳ್ಳಬೇಕು. ವಿದ್ಯಾರ್ಥಿಗಳು ಇತ್ತೀಚೆಗೆ ಮಾನವೀಯ ಮೌಲ್ಯ ಮರೆಯುತ್ತಿರುವ ಬದಲು ಕಾಪಾಡಿಕೊಳ್ಳಬೇಕು. ಸಂವಹನ ಕೌಶಲ್ಯ ಬಲದಿಂದ ವಿಶೇಷ ಸಾಧನೆ ಮಾಡಲು ಸಾಧ್ಯ. ಬದುಕಿನಲ್ಲೂ ಯಶಸ್ಸು ಕಾಣಲು ಜವಾಬ್ದಾರರು ನಾವೇ. ಶಕ್ತಿಗಿಂತ ಯುಕ್ತಿಯಿಂದ ಭವಿಷ್ಯತ್ತಿನಲ್ಲಿ ಯಶಸ್ಸು ಪಡೆಯಲು ಶ್ರದ್ಧೆ ಮತ್ತು ನಿಷ್ಠೆಯಿಂದ ನಿರಂತರ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆ.ಟಿ. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ವಿ.ಐ. ಕುರಗೋಡ ಮಾತನಾಡಿ, ಡಾ. ಬಿ.ಸಿ. ಬನ್ನೂರ ಸಮಾಜ ಉಪಯೋಗಿ ಕಾರ್ಯ ಪ್ರವೃತ್ತರಾಗುವ ಯೋಜನೆ ಹಾಕಿಕೊಂಡಿರುವುದು ಸಂತಸದ ಸಂಗತಿ. ಡಾ. ಬನ್ನೂರವರು ನಿವೃತ್ತರಾದ ನಿಮಿತ್ತ ಸನ್ಮಾನಿಸಿ, ನಿವೃತ್ತ ಜೀವನ ಸಂತಸಮಯವಾಗಿರಲಿ ಎಂದು ಹಾರೈಸಿದರು.
ರಾಜು ಕೆಂಪರಾಮಣ್ಣವರ, ಶ್ರೀಲತಾ ಮೇಲಗಿರಿ, ಸುಲಭಾ ಗುರಿಗಾರ, ಶ್ರುತಿ ಪ್ರಭುಸ್ವಾಮಿಮಠ, ವಿಶ್ವನಾಥ ಪಾಟೀಲ, ಹರ್ಷಿಕಾ ಪಾಟೀಲ, ಶಿವಚರಣ ಮುಂತಾದವರು ಮಾತನಾಡಿದರು.
ಎಂ.ಎಂ. ನರಗುಂದ, ಎಂ.ಬಿ. ಚನ್ನಪ್ಪಗೌಡರ, ಅಶೋಕ ನಿಲುಗಲ್ ಮುಂತಾದವರು ಉಪಸ್ಥಿತರಿದ್ದರು.
ಆಶಾ, ರಶ್ಮಿ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಎಸ್. ಯಂಕಂಜಿ ಸ್ವಾಗತಿಸಿದರು. ಡಾ. ವೀಣಾ ಹೂಗಾರ ನಿರೂಪಿಸಿದರು. ಎಸ್.ಜೆ. ಹಿರೇಮಠ ವಂದಿಸಿದರು.