ನಾಳೆಯಿಂದ ವಿಶೇಷ ತನಿಖಾ ಕಾರ್ಯಕ್ರಮ
ಗದಗ: ಜಿಲ್ಲೆಯಲ್ಲಿ ವಾಹನಗಳನ್ನು ನೋಂದಣಿ ಮಾಡಿಸದೆಯೇ ಬಳಸುತ್ತಿರುವುದು, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಆಡಳಿತದ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಿಂದ ಏ. 26ರಿಂದ ವಿಶೇಷ ತನಿಖಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಹನಗಳನ್ನು ಕೂಡಲೇ ನೋಂದಣಿ ಮಾಡಿಸಿ ಕಾಗದ ಪತ್ರಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳತಕ್ಕದ್ದು ಹಾಗೂ ಕೆಲವು ವಾಹನಗಳನ್ನು ನೋಂದಣಿ ಮಾಡಿಸಿದ್ದರೂ ವಾಹನಗಳ ಸಂಖ್ಯೆಯ ನೋಂದಣಿ ಫಲಕ ಬಳಸದೇ ಓಡಾಡುತ್ತಿರುವುದು ಕಂಡು ಬಂದಿದ್ದರಿಂದ ಹಾಗೂ ವಿಶೇಷವಾಗಿ ಟ್ರ್ಯಾಕ್ಟರ್ ಟ್ರೈಲರ್ ವಾಹನಗಳು ನೋಂದಣಿ ಮಾಡಿಸದೇ ಹಾಗೂ ನೋಂದಣಿ ಮಾಡಿಸಿ, ನೋಂದಣಿ ಫಲಕಗಳನ್ನು ಬಳಸದೇ ಮರಳು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಿಂದ ಏ. 26ರಿಂದ ವಿಶೇಷ ತನಿಖಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಹನ ಮಾಲೀಕರು, ಸದರಿ ವಾಹನಗಳನ್ನು ನೋಂದಣಿ ಮಾಡಿಸಿ ಕಾಗದ ಪತ್ರವನ್ನು ಚಾಲ್ತಿಯಲ್ಲಿಟ್ಟುಕೊಳ್ಳಬೇಕು ಹಾಗೂ ನೋಂದಣಿಯಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸದೇ ಸಂಚರಿಸುತ್ತಿರುವುದು ಕಂಡು ಬಂದಲ್ಲಿ ವಾಹನಗಳನ್ನು ಮುಟ್ಟುಗೊಲು ಹಾಕಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪುರುಷೋತ್ತಮ ತಿಳಿಸಿದ್ದಾರೆ.
ಡಾ. ರಾಜ್ ಜನ್ಮದಿನಾಚರಣೆ
ಗಜೇಂದ್ರಗಡ: ಸ್ಥಳೀಯ ಡಾ. ರಾಜಕುಮಾರ್ ಅಭಿಮಾನಿ ಸಂಘ ವತಿಯಿಂದ ಡಾ. ರಾಜ್ರ 86ನೇ ಹುಟ್ಟುಹಬ್ಬವನ್ನು ಗುರುವಾರ ಕೆಕ್ ಕತ್ತರಿಸಿ ಆಚರಿಸಿದರು. ದುರ್ಗಾ ವೃತ್ತದಿಂದ ಜೋಡುರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತ, ಬಸ್ನಿಲ್ದಾಣ ವರೆಗಿನ ಮಾರುಕಟ್ಟೆವರೆಗೆ ಸಾರ್ವಜನಿಕರಿಗೆ ಸಿಹಿ ಹಂಚಿದರು. ಜತೆಗೆ ಕಾಲಕಾಲೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಹಾಲು ವಿತರಿಸಿದರು. ಸಂಘದ ಅಧ್ಯಕ್ಷ ಸಂಗಪ್ಪ ಯಲಬುಣಚಿ ಮಾತನಾಡಿ, ನಟ ಡಾ. ರಾಜ್ಕುಮಾರ್ ತಮ್ಮ ಕಲಾ ಸಂಸ್ಕೃತಿಯ ಮೂಲಕ ನಾಡು, ನುಡಿ, ಭಾಷೆ ಉಳಿವಿಗಾಗಿ ಶ್ರಮಿಸುವುದರ ಜೊತೆಗೆ ಕನ್ನಡ ಸಾರಸ್ವತ ಲೋಕದ ರಾಯಭಾರಿಯಾಗಿ ಕನ್ನಡಾಂಬೆಯ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದರು. ಬಾಬು ಗೊಡೇಕಾರ ಮಾತನಾಡಿದರು. ಕಳಕಪ್ಪ ಹಡಪದ, ರಾಜಕುಮಾರ ಯಲಬುಣಚಿ, ಎಚ್.ಟಿ. ಬಳೂಟಗಿ, ಶೇಕಪ್ಪ ಮಂತಾ, ಮಹ್ಮದ ರಫೀಕ್ ಕಾತರಕಿ, ಅಮರೇಶ ಯಲಬುಣಚಿ, ಬಸವರಾಜ ಮಾಳೋತ್ತರ, ವೀರೇಶ ಹಡಪದ, ರಾಜು ಪವಾರ, ಮುನ್ನಾ ಹಣಗಿ, ನವೀನ ಯಲಬುಣಚಿ, ಮುತ್ತಪ್ಪ ಯಲಬುಣಚಿ, ಶೇಕರಪ್ಪ ಮೇಹರವಾಡೆ, ಕಳಕಪ್ಪ ಪವಾರ, ಸುಧಾಕರ ಮಹೇಂದ್ರಕರ, ರಾಜು ಹಣಗಿ, ಶಫೀಕ್ ಡಾಲಾಯತ್, ಶಹಬಾಜಿ ಗೊಲಗೇರಿ, ಕಿಟ್ಟು ಹರಿಹರ, ನರಸಿಂಹರಾಜ ಕಲಾಲ, ಬಾಷೆಸಾಬ್ ಕರ್ನಾಚಿ ಉಪಸ್ಥಿತರಿದ್ದರು.