ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಠ-ಮಾನ್ಯಗಳು ಸ್ವಸ್ಥ ಸಮಾಜ ನಿರ್ಮಾಣ ಮಾಡಲಿ

Rashmi Kasaragodu
Updated On : 25 Apr 2014, 12:06 pm

ಲಕ್ಷ್ಮೇಶ್ವರ: ಶಿಕ್ಷಣ, ಸ್ವಸ್ಥ ಕುಟುಂಬ ನಿರ್ಮಾಣ, ಸಹೋದರತೆ ಕೋಮು ಸೌಹಾರ್ದತೆ ಬೆಳೆಸುವ ಕಾರ್ಯವನ್ನು ಮಠ-ಮಾನ್ಯಗಳು ಮಾಡುವ ಮೂಲಕ ಸಮಾಜದಲ್ಲಿ ಕೊಳೆ ತೊಲಗಿಸಬೇಕಾಗಿದೆ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಸ್ವಾಮಿಗಳು ಹೇಳಿದರು.
ಅವರು ಈಚೆಗೆ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಲೋಕಾರ್ಪಣೆ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಸ್ವಾಮಿಗಳು ತಿಂಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆಯ ಮೂಲಕ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎನ್ನುವ ಕಾರ್ಯವನ್ನು ಮಾಡುತ್ತ ನೂರಾರು ಹಳ್ಳಿ ಹಾಗೂ ಪಟ್ಟಣಗಳನ್ನು ಸುತ್ತಿ ಅಲ್ಲಿನ ಜನರಲ್ಲಿರುವ ದುಶ್ಚಟಗಳನ್ನು ಬಿಡಿಸುವ ಮೂಲಕ ಜನರಲ್ಲಿ ಜಾಗೃತಿಯ ಬೀಜವನ್ನು ಬಿತ್ತುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಸಮಾಜದಲ್ಲಿನ ನೋವನ್ನು ಕಡಿಮೆ ಮಾಡುವ ಕಾರ್ಯಗಳನ್ನು ಮಠ-ಮಾನ್ಯಗಳು ಮಾಡಿದರೆ ನಮ್ಮ ಶ್ರಮ ಸಾರ್ಥಕವಾದಂತೆ. ಸಮಾಜದ ಕಣ್ಣೀರನ್ನು ಒರೆಸುವ ಕಾರ್ಯವನ್ನು ಶರಣರು ಸಂತರು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ನಡೆ ನುಡಿಗಳನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ. ಶಿವಶರಣ ಕುಂಬಾರ ಗುಂಡಯ್ಯನಂತಹ ಶರಣರು ಸಮಾಜಕ್ಕೆ ಇಂದು ಬೇಕಾಗಿದ್ದಾರೆ ಎಂದು ಹೇಳಿದರು. ಕಾಶಿ ಜಗದ್ಗುರುಗಳು ರಚಿಸಿದ ಪಾರಾಯಣ ಗ್ರಂಥವನ್ನು ಲೋಕಾರ್ಪಣೆಯನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳು ನೆರವೇರಿಸಿದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗಳು, ಕುಮಾರ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಅನೇಕರು ಹಾಜರಿದ್ದರು. ಡಾ. ಜಯಶ್ರೀ ಹೊಸಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement