ಮಡಿವಂತಿಕೆ ಹೋಗಬೇಕು: ಶಾಂತಲಿಂಗಶ್ರೀ
ನರಗುಂದ: ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ಸಮುದಾಯದಲ್ಲಿರುವ ಎಲ್ಲ ಜಾತಿಗಳು ಒಂದೇ ಎಂದು ಸಾರಿದ್ದರೂ ಸಮಾಜದಲ್ಲಿ ಇಂದಿಗೂ ಮಡಿವಂತಿಕೆ ಮುಂದುವರಿದಿದೆ. ಇದನ್ನು ಹೋಗಲಾಡಿಸುವುದು ಅಗತ್ಯವಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದೊರೆಸ್ವಾಮಿ ವಿರಕ್ತಮಠದ ಆವರಣದಲ್ಲಿ 225ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಸಮಾಜದಲ್ಲಿ ಇಂದು ಸಾಕಷ್ಟು ಬದಲಾವಣೆ ಆಗಿದ್ದರೂ ಇನ್ನು ಕೆಲವು ಕಡೆ ಮೂಢನಂಬಿಕೆಗಳಿಂದ ಈ ಮಡಿವಂತಿಕೆ ಪದ್ಧತಿ ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದ್ದರಿಂದ ಮೇಲು, ಕೀಳು ಎಂಬುವ ಭಾವನೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನರಗುಂದದ ಡಾ. ಜಯದೇವ ಪತ್ತಾರ, ಸಿದ್ದಣ್ಣ ಘಾಟಗೆ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಡಾ. ವೈ.ಎಂ. ಭಜಂತ್ರಿ, ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ ಮಾತನಾಡಿದರು.
ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ಪತ್ರೀವನಮಠದ ಗುರು ಸಿದ್ಧವೀರ ಶ್ರೀಗಳು, ವೀರೇಶ ದೇವರ, ಎಸ್.ಸಿ. ದಂಡಿನ, ಸತೀಶ ನಾಶಿ, ಬಸವರಾಜ ಆಡಿನ, ಗ್ರಾಪಂ ಅಧ್ಯಕ್ಷ ಹನುಮವ್ವ ಮಾದರ, ಉಪಾಧ್ಯಕ್ಷ ಪಾರವ್ವ ಐನಾಪುರ, ಸದಸ್ಯ ರೇಣವ್ವ ಮೇಟಿ, ಎಸ್.ಜಿ. ಮಣ್ಣೂರಮಠ, ಶಂಕರ ಕಲ್ಲಿಗನೂರ, ಕೆ.ಬಿ. ಹುಲಗೂರ, ವಿ.ಎಸ್. ಅಣ್ಣಿಗೇರಿ, ಯಲ್ಲಪ್ಪ ಹಲಕುರ್ಕಿ, ಎಂ.ಡಿ. ಮಾದರ, ಎಂ.ವಿ. ದೇವಶೆಟ್ಟಿ, ಪ್ರೊ. ಪಿ.ಎಸ್. ಅಣ್ಣಿಗೇರಿ, ಶಿವಾನಂದ ಜೋಗಿ ಇದ್ದರು. ಆರ್.ಬಿ. ಚಿನಿವಾಲರ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿದರು. ರಮೇಶ ಐನಾಪುರ ವಂದಿಸಿದರು.