ಗದಗ: ಸಂಸ್ಕೃತ ಪರೀಕ್ಷೆಯಲ್ಲಿ ಯಶಸ್ಸು
ಗದಗ: ಕರ್ನಾಟಕ ಸಂಸ್ಕೃತ ವಿವಿಯಿಂದ ಈಚೆಗೆ 2013-14ನೇ ಸಾಲಿನ ಸಂಸ್ಕೃತ ಪ್ರಥಮ, ಕಾವ್ಯ ಮತ್ತು ಸಾಹಿತ್ಯ ಪ್ರಸಿದ್ಧ ಪರೀಕ್ಷೆಯಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 100ಕ್ಕೆ 100ರಷ್ಟು ಫಲಿತಾಂಶ ಬಂದಿರುತ್ತದೆ. ಅರುಣ ಭಜಂತ್ರಿ ಪ್ರಥಮ, ಪುಟ್ಟರಾಜ ಕಲಬುರ್ಗಿ ದ್ವಿತೀಯ, ಬಸಲಿಂಗಯ್ಯ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ. ಸಂಸ್ಕೃತ ಕಾವ್ಯ ಪರೀಕ್ಷೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಯಮನೂರಪ್ಪ ಹೂಗಾರ ಪ್ರಥಮ, ಶಂಭುಲಿಂಗಸ್ವಾಮಿ ಹಿರೇಮಠ ದ್ವಿತೀಯ, ನಾಗಯ್ಯ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ. ಸಂಸ್ಕೃತ ಸಾಹಿತ್ಯ ಪರೀಕ್ಷೆಯಲ್ಲಿ ಶೇ. 89ರಷ್ಟು ಫಲಿತಾಂಶ ಬಂದಿದ್ದು, ಸಿದ್ಧಲಿಂಗೇಶ ಭಜಂತ್ರಿ ಪ್ರಥಮ, ವೀರೇಶ ಶೆಟ್ಟಿ ದ್ವಿತೀಯ, ರಾಮಚಂದ್ರ ಬಿ. ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.