ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದಿಂಡೂರಲ್ಲಿ ರಸ್ತೆಗೆ ಚರಂಡಿ ನೀರು: ರೋಗದ ಭೀತಿ

Rashmi Kasaragodu
Updated On : 27 Apr 2014, 1:09 am

ಗಜೇಂದ್ರಗಡ: ಸಮೀಪದ ದಿಂಡೂರ ಗ್ರಾಮದಲ್ಲಿನ ಮುಖ್ಯ ರಸ್ತೆಯ ಮೇಲೆ ಸಂಗ್ರಹವಾದ ಮೋರಿ(ಚರಂಡಿ) ನೀರು ಮಲೀನಗೊಂಡು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಇಲ್ಲಿ ಸಂಚರಿಸುವುದು ದುಸ್ತರವಾಗಿದೆ.
ಗ್ರಾಮದ ಅಧಿ ದೇವತೆ ದುರ್ಗಾದೇವಿ ದೇಗುಲ, ಹಾಲಿನ ಕೇಂದ್ರ ಮತ್ತು ಪ್ರೌಢ ಶಾಲೆಗೆ ಇದೇ ಮಾರ್ಗವಾಗಿ ತೆರಳಬೇಕು. ಆದರೆ, ಚರಂಡಿ ನೀರು ಕೆಲ ದಿನಗಳಿಂದ ರಸ್ತೆ ಮೇಲೆ ಸಂಗ್ರಹವಾದ ಪರಿಣಾಮ ಕ್ರಿಮಿಕೀಟ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗದ ಭೀತಿ ಗ್ರಾಮದ ಜನರನ್ನು ಕಾಡುತ್ತಿದೆ.
ಚರಂಡಿ ತುಂಬಿ ರಸ್ತೆ ಮೇಲೆ ಗಲೀಜು ನೀರು ಸಂಗ್ರಹವಾದ ಬಗೆಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯ ಸ್ಥಿತಿಯಲ್ಲಿ ಗಲೀಜು ನೀರು ತುಳಿದುಕೊಂಡೆ ನಡೆದಾಡುವ ಅನಿವಾರ್ಯತೆ ಬಂದೊದಗಿದೆ. ಸರ್ಕಾರ ಪ್ರತಿವರ್ಷ ಗ್ರಾಮಗಳ ಅನೈರ್ಮಲ್ಯ ಶುಚಿತ್ವಕ್ಕೆ ಗ್ರಾಪಂ ಆಡಳಿತಕ್ಕೆ ಲಕ್ಷಾಂತರ ಹಣ ಮಂಜೂರು ಮಾಡುತ್ತಿದೆ. ಆದರೆ, ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಸರ್ಕಾರದ ಯೋಜನೆ ಹಳ್ಳ ಹಿಡಿಯುತ್ತಿವೆ ಎನ್ನುವುದಕ್ಕೆ ದಿಂಡೂರ ಗ್ರಾಮದ ರಸ್ತೆಗಳು ಸಾಕ್ಷಿಯಾಗಿವೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಸ್ಥಳೀಯ ಆಡಳಿತಗಳಿಗೆ ನಿರ್ದೇಶನ ನೀಡಿ ಗ್ರಾಮದಲ್ಲಿನ ಸುಚಿತ್ವಕ್ಕೆ ಆದ್ಯತೆ ನೀಡಲು ಸೂಚಿಸಲು ಮುಂದಾಗದಿದ್ದಲ್ಲಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತೆವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement