ವಿದ್ಯಾವಂತರು ವಾಣಿಜ್ಯೋದ್ಯಮ ರಂಗಕ್ಕೆ ಬರಲಿ: ಲಿಂಬಯ್ಯಸ್ವಾಮಿಮಠ
ಗದಗ: ಯುವ ವಿದ್ಯಾವಂತರು ವಾಣಿಜ್ಯೋದ್ಯಮ ರಂಗಕ್ಕೆ ಬರಲಿ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹೇಳಿದರು. ಶನಿವಾರ ಜಿಲ್ಲೆಯ ಐದು ತಾಲೂಕುಗಳ ವ್ಯಾಪಾರ ಮತ್ತು ಉದ್ಯಮದಲ್ಲಿ ಸಂಘಟನೆ ಹಾಗೂ ಗದಗ ಜಿಲ್ಲಾ ಅಭಿವೃದ್ಧಿಗಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಪ್ರಥಮದಲ್ಲಿ ಹೊಳೆಆಲೂರು ವಾಣಿಜ್ಯೋದ್ಯಮ ಸಂಸ್ಥೆಯ ಎಪಿಎಂಸಿ ಸಭಾಭವನದಲ್ಲಿ ವ್ಯಾಪಾರಸ್ಥರ ಸಂಘಟನೆ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ, ಹೊಳೆಆಲೂರು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ವಿ. ಯಾವಗಲ್, ಮಾಜಿ ಅಧ್ಯಕ್ಷ ಎಸ್.ವೈ. ಮಂಡಸೊಪ್ಪಿ ಮಾತನಾಡಿದರು. ಹೊಳೆಆಲೂರು ವಾಣಿಜ್ಯೋದ್ಯಮ ಸಂಸ್ಥೆಗೆ ನೂತನವಾಗಿ ಅವಿರೋಧವಾಗಿ ಆಯ್ಕೆಗೊಂಡ ಗೌರವ ಕಾರ್ಯದರ್ಶಿ ಪಿ.ಎಚ್. ಸಂಗಟಿ ಮತ್ತು ಸಹ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಪ್ರಮಾಣ ವಚನ ಸ್ವೀಕರಿಸಿದರು.