ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸತತ ಅಭ್ಯಾಸ, ಪ್ರಯತ್ನದಿಂದ ಯಶಸ್ಸು ಸಾಧ್ಯ: ಡಂಬಳಮಠ

Rashmi Kasaragodu
Updated On : 27 Apr 2014, 1:07 am

ಮುಂಡರಗಿ: ಸತತ ಅಭ್ಯಾಸ, ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಸ್ಥಳೀಯ ಕ.ರಾ. ಬೆಲ್ಲದ ಕಾಲೇಜಿನ ಕಾರ್ಯಾಧ್ಯಕ್ಷ ಆರ್.ಬಿ. ಡಂಬಳಮಠ ಹೇಳಿದರು. ಶುಕ್ರವಾರ ಪಟ್ಣಣದ ಜ. ಅನ್ನದಾನೀಶ್ವರ ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪಠ್ಯೇತರ ಚಟುವಟಿಕೆ ಮುಕ್ತಾಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ರಿಯಾಜ ಪಾಷಾ ಮಾತನಾಡಿದರು. ಗೌರವ ಕಾರ್ಯದರ್ಶಿ ಅದಪ್ಪ ಬೆಲ್ಲದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಹಿಂದಿ ವಿಷಯದಲ್ಲಿ ಬಂಗಾರದ ಪದಕ ಪಡೆದ ವೀರೇಶ ಬಿಸನಳ್ಳಿ, ದೆಹಲಿ ಗಣರಾಜ್ಯೋತ್ಸವ ಪರೆಡ್ನಲ್ಲಿ ಭಾಗವಹಿಸಿದ್ದ ಕಿರಣ ಶಾನಭಾಗ ಮತ್ತು ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಡಾ. ರಿಯಾಜ ಪಾಷಾ ಅವರನ್ನು ಸನ್ಮಾನಿಸಲಾಯಿತು.


ಇಂದು ನಾಟಕ ಪ್ರದರ್ಶನ


ಶಿರಹಟ್ಟಿ: ಸಮೀಪದ ಮಾಗಡಿ ಗ್ರಾಮದ ರಂಗ ಮಂದಿರದಲ್ಲಿ ಏ. 27ರಂದು ರಾತ್ರಿ 10ಕ್ಕೆ ವೀರಭದ್ರೇಶ್ವರ ಯುವಕಲಾ ನಾಟ್ಯ ಸಂಘದ ವತಿಯಿಂದ ಧರ್ಮತುಂಬಿದ ಮನೆ(ಮಾತು ಸಿಡಿಯಿತು ಮತ್ತು ಒಡೆಯಿತು) ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ಲಲಿತವ್ವ ಬರಗಡಗಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವೀರಣ್ಣ ಅಂಗಡಿ, ಬಸವರಾಜ ಪಲ್ಲೇದ, ಕೆಂಚನಗೌಡ್ರ ಪಾಟೀಲ, ಶೇಖಪ್ಪ ಬಡ್ನಿ, ಮಲ್ಲಿಕಾರ್ಜುನ ಮಡಿವಾಳರ, ಗ್ರಾಪಂ ಸದಸ್ಯರು ಆಗಮಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ದ್ಯಾಮಣ್ಣ ರಾವುತ, ವೈದ್ಯರಾದ ವಿಜಯಕುಮಾರ ಅಂಗಡಿ, ಪ್ರವೀಣ ಮಳ್ಳೂರು ಅವರನ್ನು ಸನ್ಮಾನಿಸಲಾಗುವುದು ಎಂದು ಸಂಚಾಲಕ ನಾಗರಾಜ ತೋಟದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement