ಅಪಾಯ ಆಹ್ವಾನಿಸುವ ಕಂದಕ
ಗಜೇಂದ್ರಗಡಕ್ಕೆ ಸಮೀಪದ ಕಾಲಕಾಲೇಶ್ವರ ಗ್ರಾಮದಿಂದ ದಿಂಡೂರ ಗ್ರಾಮಕ್ಕೆ ಸಂಚರಿಸುವ ರಸ್ತೆ ಮಾರ್ಗದ ಕಿರು ಸೇತುವೆ ಬದಿಗೆ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ಈಗಾಗಲೇ ಹಲವಾರು ವಾಹನ ಸವಾರರು ಅದರಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ರಸ್ತೆ ಮಧ್ಯೆ ಸಣ್ಣ ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಈ ಕಿರುಸೇತುವೆ ನಿರ್ಮಿಸಲಾಗಿತ್ತು. ಆದರೆ, ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಸೇತುವೆ ಬದಿಯ ಮುಂಭಾಗ ಕಳಚಿದ್ದು, ಜತೆಗೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಇದರಿಂದ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ಆ ಕಂದಕದಲ್ಲಿ ಅರಿವಿಗೆ ಬಾರದೇ ಬಿದ್ದು ಗಾಯಗೊಂಡಿದ್ದಾರೆ. ಸುಗಮ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಈ ರಸ್ತೆಯ ಡಾಂಬರ್ ಕೂಡ ಅಲ್ಲಲ್ಲಿ ಕಿತ್ತಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ. ರಸ್ತೆ ಮತ್ತು ಸೇತುವೆ ಬದಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನಾನುಕೂಲವಾಗಿದ್ದರಿಂದ ಈ ಸೇತುವೆ ಕೆಳಗೆ ಕಂದಕ ನಿರ್ಮಾಣವಾಗಿದೆ. ಇದು ಸಂಚಾರಿಗಳ ಜೀವಕ್ಕೆ ಸಂಚಕಾರ ತಂದ್ದೊಡ್ಡಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕಡಿದು ಹೋದ ಕಿರು ಸೇತುವೆ ಪುನರ್ ನಿರ್ಮಾಣಕ್ಕೆ ಮುಂದಾಗಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಿ.
ಟ ದಿಂಡೂರು ಗ್ರಾಮಸ್ಥರು