ಗರ್ಭಿಣಿ ಆರೋಗ್ಯದ ಕಾಳಜಿ ವಹಿಸಿ
ಲಕ್ಷ್ಮೇಶ್ವರ: ಗರ್ಭಿಣಿಯರು ಉತ್ತಮ ಆರೋ ಗ್ಯಕ್ಕಾಗಿ ನಿಯಮಿತವಾಗಿ ವೈದ್ಯರ ಸಲಹೆ, ಮಾರ್ಗದರ್ಶನ ಪಡೆಯಬೇಕೆಂದು ಬೆಂಗಳೂರಿನ ಸ್ತ್ರೀರೋಗ ತಜ್ಞ ಡಾ ಎಸ್.ಎನ್. ಆನೆಗುಂದಿ ಹೇಳಿದರು.
ಭಾನುವಾರ ಪಟ್ಟಣದ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಸ್ತ್ರೀರೋಗ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ಮಗುವಿನ ಜನ್ಮಕ್ಕೂ ಮೊದಲು ಹಾಗೂ ಆಮೇಲೆ ತಮ್ಮ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗರ್ಭಿಣಿಯರಲ್ಲಿ ರಕ್ತಹೀನತೆ ಹಾಗೂ ಅಧಿಕ ರಕ್ತದೊತ್ತಡ ಸಾಮಾನ್ಯ. ಇದರ ಭಯ ಪಡೆದೆ ಬಗ್ಗೆ ವೈದ್ಯರ ಸಲಹೆ ಪಡೆಯಿರಿ ಎಂದರು. ಗ್ರಾಮೀಣ ಮಹಿಳೆಯರು ಮೂಢನಂಬಿಕೆಗಳಿಗೆ ಮೊರೆ ಹೋಗುವುದನ್ನು ಕಾಣುತ್ತೇವೆ. ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಜೀವಕ್ಕೆ ಅಪಾಯ ತಂದುಕೊಳ್ಳುವ ಸಂದರ್ಭಗಳೂ ಇವೆ. ತಜ್ಞ ವೈದ್ಯರ ಬಳಿ ಹೆರಿಗೆ ಮಾಡಿಸಿಕೊಳ್ಳುವುದರಿಂದ ಗರ್ಭಿಣಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗದು ಎಂದರು. ಡಾ ರೇಷ್ಮಾ ರಾಠೋಡ ಹಾಗೂ ಡಾ ದೀಪಾ ಬಿ.ವಿ. 100ಕ್ಕೂ ಹೆಚ್ಚು ಮಹಿಳೆಯರನ್ನು ಉಚಿತವಾಗಿ ತಪಾಸಣೆ ಮಾಡಿದರು. ಔಷಧಿ ಉಚಿತವಾಗಿ ವಿತರಿಸಲಾಯಿತು.