ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ
ಗಜೇಂದ್ರಗಡ: ವಿದ್ಯಾರ್ಥಿಗಳು ಸತತ ಅಧ್ಯ ಯನ ಜತೆ ಕ್ರಿಯಾಶೀಲತೆ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬುದ್ಧಿಮಟ್ಟ ಹೆಚ್ಚುವುದಲ್ಲದೇ ಪ್ರತಿಭೆ ಅನಾವರಣಗೊಳ್ಳುವುದು ಎಂದು ಉಪನ್ಯಾಸಕ ಬಿ.ಎ. ಕೆಂಚರಡ್ಡಿ ಹೇಳಿದರು.
ಅವರು ಸ್ಥಳೀಯ ಬಿಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯ ಜೀವನದ ಅತ್ಯಂತ ಪ್ರಮುಖ ಘಟ್ಟವೆನಿಸಿರುವ ವಿದ್ಯಾರ್ಥಿ ಜೀವನ ವ್ಯರ್ಥ ಮಾಡದೇ ಸನ್ನಡತೆಯಿಂದ ವಿದ್ಯೆ ಸಂಪಾದಿಸಿದಾಗ ಮಾತ್ರ ಸಮಾಜದ ಉತ್ತಮ ಪ್ರಜೆಯಾಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಕ್ಷರ ಜ್ಞಾನ ಪಡೆದು ಶಾಲೆಗೆ ಕೀರ್ತಿ ತನ್ನಿ ಎಂದರು. ಪ್ರಾಚಾರ್ಯ ಬಿ.ಎಚ್. ಕ್ಯಾರೇಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಲವು ಸಾಂಸ್ಕೃತಿಕ ಕ್ರೀಡಾ, ಚಟುವಟಿಕೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ವಿ.ಪಿ. ಹಿತ್ತಲಮನಿ, ಐ.ಎಂ. ದಾವಣಗೇರಿ, ಜೆ.ಟಿ. ಹುಲ್ಲೂರ, ಲಕ್ಷ್ಮೀ. ಪಿ, ಗಂಗಮ್ಮ ಎಂ, ಪಿ.ಎಂ. ದಿವಾಣದ, ಬಿ.ವಿ. ಮುನವಳ್ಳಿ, ಡಾ.ಎಂ.ವಿ. ಕುಂಬಾರ, ಎಚ್.ಎಚ್. ಪವಾರ, ಶರಣಪ್ಪ ರಾಜೂರ, ರಾಮಪ್ಪ ಭಜಂತ್ರಿ, ಮಂಜುನಾಥ ಹದ್ದಣ್ಣವರ, ಪ್ರೇಮಾ ಹುನಗುಂದ, ಕಳಕಪ್ಪ ಒದೇಗೋಳ, ರಾಜು ಮಿಸ್ಕಿನ್ ಮುಂತಾದವರು ಉಪಸ್ಥಿತರಿದ್ದರು.