ಢೋಂಗಿ ಸ್ವಾಮೀಜಿ ಬಂಧಿಸಿ
ಗಜೇಂದ್ರಗಡ: ಜ್ಯೋತಿಷ್ಯಶಾಸ್ತ್ರ ಹೇಳುವ ನೆಪದಲ್ಲಿ ಮಹಿಳೆಯರ ಅಮಾಯಕತೆ ದುರ್ಬಳಕೆ ಮಾಡಿ ಅತ್ಯಾಚಾರದಂತ ಹೀನ ಕೃತ್ಯಕ್ಕೆ ಇಳಿದಿರುವ ದೇವಿಶ್ರೀ ಡೊಂಗಿ ಶಾಸ್ತ್ರೀಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರವೇ (ಸ್ವಾಭಿಮಾನಿಬಣ) ಸೋಮವಾರ ವಿಶೇಷ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಮಾರುತಿ ಮಾಳೋತ್ತರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೌರವಾನ್ವಿತ ಸ್ಥಾನ ಪಡೆದಿರುವ ಗುರುವಿನ ಸ್ಥಾನಕ್ಕೆ ಅಪಚಾರವೆಂಬಂತೆ ಕೆಲ ಅವಿವೇಕಿಗಳು ಸ್ವಾರ್ಥ ಸಾಧನೆಗೆ ಸಮಾಜದ ಸ್ವಸ್ಥ ಕೆದಕುವ ಅಮಾನವಿಯ ಕೃತ್ಯಗಳನ್ನು ಎಸಗಿ ಜ್ಯೋತಿಷ್ಯ ಪಾರಂಪರೆಗೆ ಚ್ಯುತಿಯುಂಟು ಮಾಡುತ್ತಿರುವುದು ಅಲ್ಲಲ್ಲಿ ಕೇಳಿಬರುತ್ತಿರುವುದು ಶೋಚನಿಯ. ಈ ದೆಸೆಯಲ್ಲಿ ಕರವೇ ಸಮಾಜದ ಸ್ವಸ್ಥ, ಗೌರವ ಕಾಪಾಡುವಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಜತೆಗೆ ಇಂತಹ ಕಪಟ ಸ್ವಾಮೀಜಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ತಕ್ಕ ಶಾಸ್ತಿ ಮಾಡಿಸಲು ಹಿಂಜರಿಯುವುದಿಲ್ಲ ಎಂದರು.
ನಗರ ಘಟಕ ಅಧ್ಯಕ್ಷ ಮಹೇಶ ಪಾಟೀಲ, ಮಹೇಶ ಗಡೆದವರ, ಉಮರ ಕಂದಗಲ್, ಶಶಿಧರ ಸಾಲಿಮಠ, ಎಫ್.ಕೆ. ಕಾತರಕಿ, ವಿರೇಶ ರಾಠೋಡ್, ಹರೀಶ ಯಂಕಂಚಿ, ಈಶಪ್ಪ ರಾಠೋಡ್, ಗೋಪಿಕೃಷ್ಣ ಕರಾಟೆ, ಸಮೀರ ಕೊರ್ಲಹಳ್ಳಿ ಉಪಸ್ಥಿತರಿದ್ದರು.
ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿ ಮನವಿ ಸ್ವೀಕರಿಸಿದರು.