ದುರ್ಗಾದೇವಿ ಜಾತ್ರಾ ಮಹೋತ್ಸವ ಸಭೆ ಇಂದು
ಗದಗ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗದಗ ಬೆಟಗೇರಿ ಅವಳಿ ನಗರದ ಗ್ರಾಮದೇವತೆ ಗಂಗಾಪುರಪೇಟೆ ದುರ್ಗಾದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಏ. 29ರಂದು ಸಂಜೆ 7ಕ್ಕೆ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಸಭೆಯಲ್ಲಿ 2011ರ ಆಯವ್ಯಯ ಪರಿಶೀಲಿಸಿ ಮಂಜೂರಿ ನೀಡುವುದು ಹಾಗೂ 2014ರ ಪದಾಧಿಕಾರಿಗಳ ಆಯ್ಕೆ ಮುಂತಾದ ವಿಷಯಗಳ ಚರ್ಚೆ ನಡೆಯಲಿದೆ ಎಂದು ಕಾರ್ಯದರ್ಶಿ ಎಸ್.ಎಂ. ಕವಳಿಕಾಯಿ ಹಾಗೂ ಅಧ್ಯಕ್ಷ ವಿ.ಎ. ಪಟೇಲ್ ತಿಳಿಸಿದ್ದಾರೆ.
ಮೇ 4ಕ್ಕೆ ಚಿತ್ರಕಲಾ ಸ್ಪರ್ಧೆ
ಗದಗ: ಗದಗ-ಬೆಟಗೇರಿ ಭಾವಸಾರ ವಿಜನ್ ಇಂಡಿಯಾ ಹಾಗೂ ಗದುಗಿನ ವಿಜಯ ಕಲಾ ಮಂದಿರ ಸಂಸ್ಥೆಯ ಸಹಯೋಗದಲ್ಲಿ ಮೇ 4ರಂದು ಬೆಳಗ್ಗೆ 9ಕ್ಕೆ ನಗರದ ವಿಜಯ ಕಲಾ ಮಂದಿರದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. 1ರಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಎರಡು ಪ್ರತ್ಯೇಕ ಗುಂಪು ಮಾಡಿದ್ದು, ಆಸಕ್ತ ವಿದ್ಯಾರ್ಥಿಗಳು ಮಾಹಿತಿಗಾಗಿ ಹಾಗೂ ಉಚಿತ ಹೆಸರು ನೋಂದಣಿಗಾಗಿ ವಿಜಯಕಲಾ ಮಂದಿರ ಸಂಪರ್ಕಿಸಿ.
--