ಪ್ರಶಿಕ್ಷಣಾರ್ಥಿಗಳಿಂದ ದೇವಸ್ಥಾನ ಭೇಟಿ, ಮಾಹಿತಿ ಸಂಗ್ರಹ
ಗದಗ: ನಗರದ ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಳವಂಡಿಯ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ವಿಷಯದ ದತ್ತಕಾರ್ಯ ಮತ್ತು ಗಂಪು ಚಟುವಟಿಕೆ ಅಂಗವಾಗಿ ಪ್ರಶಿಕ್ಷಣಾರ್ಥಿಗಳು ನಗರದ ತ್ರಿಕೊಟೇಶ್ವರ ದೇವಾಸ್ಥಾನಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಎಸ್.ಬಿ. ಹಬೀಬ ಗುಂಪು ಚಟುವಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಲ್. ಹಿರೆಕೇರೂರ, ಉಪನ್ಯಾಸಕ ಶಿವಣ್ಣ, ಗೀತಾ ಹುಲಕುಂದ ಮುಂತಾದವರು ಭಾಗವಹಿಸಿದ್ದರು. ಗುಂಪು ಚಟುವಟಿಕೆಯ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಭಕ್ತಿಗೀತೆ, ಭಾವಗೀತೆ, ವಚನ ತತ್ವಪದಗಳನ್ನು ಹಾಡಿದರು. ಶ್ರೀದೇವಿ ಅಕ್ಕಸಾಲಿ ಪ್ರಾರ್ಥಿಸಿದರು. ವಿರೂಪಾಕ್ಷ ಬಡಿಗೇರ ಸ್ವಾಗತಿಸಿದರು. ಶರಣಮ್ಮ ಕೆ.ಎಂ. ನಿರ್ವಹಿಸಿದರು. ಎಂ.ಟಿ. ಹಿರೇಮಠ ವಂದಿಸಿದರು.