ಶಾಲೆ ಬಿಟ್ಟ ಮಕ್ಕಳು ಮುಖ್ಯವಾಹಿನಿಗೆ ಬರಲಿ
ಗದಗ: ಚಿಣ್ಣರ ಅಂಗಳ ಕಾರ್ಯಕ್ರಮವು ಶಾಲೆ ಬಿಟ್ಟಂತಹ ಹಾಗೂ ಶಾಲೆಗೆ ಸೇರಿಲ್ಲದ ಮಕ್ಕಳಿಗಾಗಿ ಸೇತುಬಂಧ ಶಿಕ್ಷಣವಾಗಿದ್ದು, ಚಿಣ್ಣರು ಇದರ ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಗದಗ ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ವರವಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ಗದುಗಿನ ಬಸವೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳದಲ್ಲಿ ಗದಗ ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ಚಿಣ್ಣರೊಂದಿಗೆ ನಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು, ಅವರಲ್ಲಿ ಕಲಿಕಾಸಕ್ತಿ ಮೂಡಿಸಲು ವಿವಿಧ ಕೌಶಲ್ಯಗಳನ್ನು ಇಲ್ಲಿ ನೀಡಲಾಗುತ್ತಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ಮಕ್ಕಳ ಆಸಕ್ತಿಯಿಂದ ಇದರಲ್ಲಿ ಪಾಲ್ಗೊಂಡಿರುವುದು ಶಿಕ್ಷಕರ ಆಸಕ್ತಿದಾಯಕ ಕಲಿಕೆಯೇ ಕಾರಣವಾಗಿದೆ ಎಂದರು. ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್. ಬಳ್ಳಾರಿ, ಮುಖ್ಯೋಪಾಧ್ಯಾಯ ವೈ.ಎ. ಕವಳಿ, ಗದಗ ಶಹರ ಬಿಆರ್‌ಪಿ ಪಿ.ಡಿ. ಮಂಗಳೂರ, ಮುಖ್ಯೋಪಾಧ್ಯಾಯ ಪಿ.ಎಲ್. ರಾಠೋಡ ಮಾತನಾಡಿದರು. ರತ್ನಕ್ಕ ಪಾಟೀಲ, ಭಾರತಿಬಾಯಿ ಬದಿ, ಎಚ್.ಎಂ. ಉಳ್ಳಿಕಾಸಿ, ಎನ್.ಸಿ. ಹದ್ಲಿ, ಚೆನ್ನಾರೆಡ್ಡಿ ಗೂಳರೆಡ್ಡಿ, ಜಯಶ್ರೀ ಶ್ರೀಗಿರಿ, ಗೀತಾಂಜಲಿ ಮೆಣಸಿನಕಾಯಿ, ಚಿಣ್ಣರ ಅಂಗಳ ಕೇಂದ್ರದ ಮೇಲ್ವಿಚಾರಕರಾದ ಎಸ್.ಕೆ. ಮಂಗಳಗುಡ್ಡ ಮುಂತಾದವರು ಹಾಜರಿದ್ದರು. ಇನ್ನರ್‌ವ್ಹೀಲ್ ಕ್ಲಬ್‌ದಿಂದ ಚಿಣ್ಣರ ಅಂಗಳ ಕೇಂದ್ರಕ್ಕೆ ಶುದ್ಧ ಕುಡಿವ ನೀರಿನ 10 ಲೀಟರ್ ಬಾಟಲ್‌ನ್ನು ಕಾಣಿಕೆಯಾಗಿ ಡಾ.ಎಸ್.ಎಫ್. ವರವಿ ನೀಡಿದರು. ಸುಮಾ ಪಾಟೀಲ ಪ್ರಾರ್ಥಿಸಿದರು. ವಿದ್ಯಾ ಸೂಡಿಶೆಟ್ಟರ ಪರಿಚಯಿಸಿದರು. ಕವಿತಾ ದಂಡಿನ ನಿರೂಪಿಸಿದರು. ಸುಲೋಚನಾ ಐಹೊಳಿ ವಂದಿಸಿದರು.