ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಮದೇವ್ ಪ್ರತಿಕೃತಿ ದಹಿಸಿ ಪ್ರತಿಭಟನೆ

Rashmi Kasaragodu
Updated On : 30 Apr 2014, 12:45 pm

ಗದಗ: ದಲಿತರನ್ನು ಅವಮಾನಿಸಿರುವ ವಿಕೃತ ಮನಸ್ಸಿನ ಕಪಟ ಸನ್ಯಾಸಿ ಬಾಬಾ ರಾಮದೇವ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆಯ ವತಿಯಿಂದ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಬಾಬಾರಾಮದೇವ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
  ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ವಿನಾಯಕ ಬಳ್ಳಾರಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ದಲಿತ ಜನಾಂಗಗಳ ಕುರಿತು ಇನ್ನೂ ಅಸಮಾನತೆಯಿಂದ, ಅಮಾನವೀಯವಾಗಿ ಕಾಣುತ್ತಿದ್ದಾರೆ ಎನ್ನುವುದಕ್ಕೆ ಬಾಬಾ ರಾಮದೇವ್ ಹೇಳಿಕೆ ಸಾಕ್ಷಿಯಾಗಿದ್ದು, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ಈ ಹೇಳಿಕೆಯನ್ನು ಖಂಡಿಸಬೇಕಾಗಿದೆ. ತಮ್ಮ ಮಾತಿನ ತಿಟೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ರಾಮದೇವ್ ಮಾಡುತ್ತಿದ್ದು, ಸಮಾಜ ಘಾತುಕ, ದಲಿತ ವಿರೋಧಿ ರಾಮದೇವ್ ಈ ಕೂಡಲೇ ಅವರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸರ್ಕಾರ ದಲಿತರ ಹಕ್ಕುಗಳನ್ನು ರಕ್ಷಿಸಲು ಹಾಗೂ ದೇಶದಲ್ಲಿ ಶಾಂತಿ, ಸೌಹಾರ್ದನೆ ನೆಲಸಲು ಪ್ರಾಧಾನ್ಯತೆ ನೀಡಬೇಕು ಎಂದರು.
  ಗದಗ-ಬೆಟಗೇರಿ ನಗರಸಭೆಯ ಆವರಣದ ಡಾ. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ಗಾಂಧಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಬಾಬಾರಾಮದೇವ್ ಪ್ರತಿಕೃತಿ ದಹಿಸಿ ಪ್ರತಿಭಟನೆ   ಜರುಗಿಸಿದರು. ನಂತರ ಮೆರವಣಿಗೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ  ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ ಹೂಲಿ, ಯುವರಾಜ ಬಳ್ಳಾರಿ, ವಿದ್ಯಾಧರ ದೊಡ್ಡಮನಿ, ಮಾರುತಿ ಗುಡಿಮನಿ, ಜಗದೀಶ ಮಲ್ಲಣ್ಣನವರ, ಧರ್ಮಣ್ಣ ಹೊಸಮನಿ, ನಾಗರಾಜ ಗುತ್ತಿ, ಪರಶುರಾಮ ಪೂಜಾರ, ಸಿದ್ದು ಹಾದಿಮನಿ, ಶಿವಮೂರ್ತಪ್ಪ ಹರಿಜನ, ಕೆಂಚಪ್ಪ ಪೂಜಾರ, ರವಿ ಹಾದಿಮನಿ, ರಪಸಪ್ಪ ಕಳಸಾಪೂರ, ಶಿವು ಜಂಬಲದಿನ್ನಿ, ಮಂಜು ಪೂಜಾರ, ರಮೇಶ ರಾಜಣ್ಣನವರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement