ವಿದ್ಯಾರ್ಥಿಗಳ ದಾಖಲಿಸಲು ಅರ್ಜಿ ಆಹ್ವಾನ
ಗದಗ: 2014-15ನೇ ಸಾಲಿಗೆ ಪ. ಜಾತಿ, ಪ. ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ದಾಖಲಿಸುವ ಕುರಿತು ಅರ್ಜಿ ಕರೆಯಲಾಗಿದೆ. ಇಲಾಖೆಯಿಂದ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನ ಶಾಲೆಯನ್ನು ಪ್ರತಿಷ್ಟಿತ ಶಾಲೆ ಎಂದು ಗುರುತಿಸಲಾಗಿದೆ. ಜಿಲ್ಲೆಯ ಪ.ಜಾತಿ, ಪ. ವರ್ಗದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ದಾಖಲಿಸುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ ರು. 2 ಲಕ್ಷ ಮಿತಿಯೊಳಗೆ ಇರಬೇಕು. ವಿದ್ಯಾರ್ಥಿಗಳ ಜಾತಿ, ಆದಾಯ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳ ದೃಢೀಕೃತ ಪ್ರತಿ ಅರ್ಜಿಯೊಂದಿಗೆ ಲಗತ್ತಿಬೇಕು. ಲಾಟರಿ ಮುಖಾಂತರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಆಯಾ ತಾಲೂಕಿನ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಂದ ಪಡೆದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ ಗದಗ ಇಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ.
ಬೂದಿಹಾಳ ಕ್ರಾಸ್ ರಸ್ತೆ ದುರಸ್ತಿಗೆ ಆಗ್ರಹ
ಮುಂಡರಗಿ: ತಾಲೂಕಿನ ಬೂದಿಹಾಳ ಕ್ರಾಸ್ ಹತ್ತಿರ ಮುಂಡರಗಿ-ಶಿರಹಟ್ಟಿ ರಸ್ತೆಯಲ್ಲಿ 2-3 ತಿಂಗಳಿನಿಂದ ಬಿದ್ದ ಗುಂಡಿಗಳು ಅಪಾಯಕ್ಕಾಗಿ ಆಹ್ವಾನ ನೀಡುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೂದಿಹಾಳ, ಕಲಕೇರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿಗಾಗಿ ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ತಿರುಗಿ ನೋಡುತ್ತಿಲ್ಲ. ಶಾಸಕರು ನಿತ್ಯ ಇದೇ ರಸ್ತೆಯಲ್ಲಿ ಶಿರಹಟ್ಟಿಗೆ ತೆರಳುತ್ತಾರೆ. ಅವರೂ ಕ್ರಮ ಕೈಗೊಳ್ಳುತ್ತಿಲ್ಲ. ಆಕಸ್ಮಿಕವಾಗಿ ಬಂದ ಪ್ರಯಾಣಿಕರಿಗೆ ಈ ಗುಂಡಿಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಯಾಣಿಕರಿಗೆ ಗುಂಡಿಗಳ ಬಗ್ಗೆ ತಿಳಿಸಲು ಮುಳ್ಳಿನ ಕಂಟಿಯನ್ನು ಇಡಲಾಗಿದೆ. ಇಲ್ಲಿ ದೊಡ್ಡ ಅಪಾಯ ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಗುಂಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಕಲಕೇರಿ ಯುವ ಮುಖಂಡ ಡಿ.ಎಂ. ತಾಮ್ರಗುಂಡಿ ಒತ್ತಾಯಿಸಿದ್ದಾರೆ.