ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾರಿಗೆ ಸಂಸ್ಥೆ ಧೋರಣೆ ಖಂಡಿಸಿ ಮನವಿ

Rashmi Kasaragodu
Updated On : 30 Apr 2014, 12:47 pm

ಮುಂಡರಗಿ: ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೇಗದೂತ ವಾಹನಗಳ ಪ್ರಯಾಣ ದರ ಅವೈಜ್ಞಾನಿಕವಾಗಿ ವಸೂಲಿ ಖಂಡಿಸಿ ಮೇ 17ರಂದು ಮುಂಡರಗಿಯ ಕೊಪ್ಪಳ ವೃತ್ತದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಸಲ್ಲಿಸಿದಾಗ ಸಂಸ್ಥೆ ಮನವಿ ಆಧಾರದ ಮೇಲೆ ನ್ಯಾಯಾಲಯದ ನೋಟಿಸ್ ನೀಡಿ ದಾವೆ ಹೂಡಿದ ಕ್ರಮ ವಿರೋಧಿಸಿ ನಾನಾ ಸಂಘಟನೆಗಳ ಮಂಗಳವಾರ ಮುಖ್ಯಸ್ಥರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯ ಅಸ್ಪೃಶ್ಯರ ವಿಮೋಚನ ಸಮಿತಿ ಅಧ್ಯಕ್ಷ ರಾಮಚಂದ್ರ ಗಾರವಾಡ ಮಾತನಾಡಿ, ಸಾರ್ವಜನಿಕರ ಹಿತಕ್ಕಾಗಿ ನ್ಯಾಯಯುತ ಬೇಡಿಕೆ ಬಗ್ಗೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೆ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಜೆಎಂಎಫ್ಸಿ ಮೂಲಕ ಹೋರಾಟ ನಡೆಸಲಿರುವ ಸಂಚಾಲಕ ಬಸವರಾಜ ನವಲಗುಂದ ಅವರ ಮೇಲೆ ದಾವೆ ಹೂಡಲಾಗಿದೆ. ಎಲ್ಲ ಕಡೆಗೂ ನಿಲುಗಡೆಯಾಗುವ ಬಸ್ಸಿಗೆ ಎಕ್ಸ್ಪ್ರೆಸ್ ದರ ಏಕೆ ವಸೂಲಿ ಮಾಡಲಾಗುತ್ತಿದೆ. ಈ ನೀತಿ ಖಂಡಿಸಿ ಹೋರಾಟ ಮಾಡಲಾಗುವುದು ಎಂದು ಮನವಿ ನೀಡಿದ್ದು ತಪ್ಪೆ ಎಂದಿರುವ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣ ದಾಖಲು ವಾಪಸ್ಸು ಪಡೆದು ಸಾರ್ವಜನಿಕರಿಗೆ ನ್ಯಾಯ ರೀತಿಯಲ್ಲಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಪರವಾಗಿ ಎಂ.ಎ. ನದಾಫ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗೆ ಕಳಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಅಲ್ಲಾಭಾಕ್ಷಿ ಅಳವಂಡಿ, ಕರವೇ ಮುಖಂಡ ಶಿವು ಬಾರಕೇರ, ಮಂಜುನಾಥ ಕಟ್ಟಿಮನಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ಕೃಷ್ಣ ರಾಮೇನಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement