ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಬಸವ ಜಯಂತಿ ಶತಮಾನೋತ್ಸವ

Vishwanath S
Updated On : 1 May 2014, 11:27 am

ನರೇಗಲ್ಲ: ಮೇ 2ರಂದು ಮಧ್ಯಾಹ್ನ 3ಕ್ಕೆ ಸ್ಥಳೀಯ ಗಾಂಧಿ ಭವನದಿಂದ ಬಸವ ಜಯಂತಿ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಜರುಗಲಿದೆ.
ಮೆರವಣಿಗೆಯು ಪಟ್ಟಣದ ಗಾಂಧಿಭವನದಿಂದ ಹೊರಟು ಮಾಜಿ ಗೌಡರ ಮನೆ, ಗಣಪತಿ ದೇವಸ್ಥಾನ, ಹಳೇಬಜಾರ, ಉರ್ದು ಸ್ಕೂಲ್, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣಗಳ ಮೂಲಕ ಮರಳಿ ಗಾಂಧಿ ಭವನ ತಲುಪುವದು. ಈ ಉತ್ಸವದ ಉದ್ಘಾಟನೆಯನ್ನು ಸ್ಥಳೀಯ ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ನೆರವೇರಿಸುವರು.
ಸಂಜೆ 6ಕ್ಕೆ ಬಸವ ಜಯಂತಿ ಉದ್ಘಾಟನೆ ಹಾಗೂ ಸದ್ಭಾವನಾ ದಿನಾಚರಣೆ ಜರುಗಲಿದ್ದು, ಹಾಲಕೇರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು.
ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪದ ಶಿವಬಸವ ಶ್ರೀಗಳು ಹಾಗೂ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಬಸವ ಜಯಂತಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ವಂಕಲಕುಂಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮುಂಡರಗಿ ಕೆ.ಆರ್. ಬೆಲ್ಲದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಲ್. ಪೊಲೀಸ್‌ಪಾಟೀಲ, ಪಪಂ ಮಾಜಿ ಅಧ್ಯಕ್ಷ ಉಮೇಶ ಸಂಗನಾಳಮಠ, ಉಪನ್ಯಾಸಕರಾಗಿ ಅಖಿಲ ಭಾರತ ಕೇಂದ್ರೀಯ ವೀರಶೈವ ಮಹಾಸಭಾದ ಸದಸ್ಯ ಸಿ.ಜಿ. ಹುಡೇದಗಡ್ಡಿ ಆಗಮಿಸುವರು. ಇದೇ ಸಂದರ್ಭ ಡಾ. ಶಿವರಾಜ ಗುರಿಕಾರ ಹಾಗೂ ಡಾ. ಬಸವಂತರಾಯ ಗೂಳಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement