ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಾಬಾ ರಾಮದೇವ್ ಹೇಳಿಕೆ ಖಂಡಿಸಿ ಪ್ರತಿಭಟನೆ

Vishwanath S
Updated On : 1 May 2014, 11:27 am

ಕನ್ನಡಪ್ರಭ ವಾರ್ತೆ, ಗದಗ, ಏ. 30
ರಾಹುಲ್ ಗಾಂಧಿ ಹಾಗೂ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಾಬಾ ರಾಮದೇವ್‌ರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕ, ಯುವ ಕಾಂಗ್ರೆಸ್ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಾಬಾ ರಾಮದೇವ್‌ರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕಡೇಮನಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಪರಿಶಿಷ್ಟ ಜಾತಿ, ಪ್ರವರ್ಗ ದಲಿತ ಜನಾಂಗಗಳನ್ನು ಅಸಮಾನತೆಯಿಂದ ಹಾಗೂ ಅಮಾನವೀಯವಾಗಿ ಕಾಣುತ್ತಿದ್ದಾರೆ ಎನ್ನುವುದಕ್ಕೆ ರಾಷ್ಟ್ರದ ಯೋಗಗುರು ಎನಿಸಿಕೊಂಡಿರುವ ಢೋಂಗಿ ಬಾಬಾರಾಮದೇವ್‌ನೇ ಸಾಕ್ಷಿ. ಜಾತಿಯ ಕುರಿತು ಅವಹೇಳನಕಾರಿಯಾಗಿ ಹಾಗೂ ತುಚ್ಯವಾಗಿ ಮಾತನಾಡಿರುವುದು ಖಂಡನಾರ್ಹ. ಇಂತಹ ಅವಹೇಳನಕಾರಿ ಮಾತುಗಳು ಸಮಾಜದಲ್ಲಿ ಶಾಂತಿ ಕದಡ ಬಹುದಾಗಿದ್ದು, ಇವರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಗದಗ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಬಾಬಾರಾಮದೇವ್‌ರ ಈ ವರ್ತನೆಯು ಅವರಿಗೆ ಶೋಭೆ ತರುವಂತದ್ದಲ್ಲ. ಈ ರೀತಿಯಾಗಿ ವರ್ತಿಸಿದ್ದು ಮುಂದಿನ ದಿನಗಳಲ್ಲಿ ಅವರು ಸಮಾಜದಲ್ಲಿ ಶಾಂತಿ ಕದಡುವ ಒಬ್ಬ ವ್ಯಕ್ತಿಯಾಗಿ ಪರಿಣಮಿಸಬಹುದು. ಕಾರಣ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಎಸ್‌ಟಿ ವಿಭಾಗದ ರಾಜ್ಯ ಉಪಾಧ್ಯಕ್ಷ ರಾಮಣ್ಣ ಫಲದೊಡ್ಡಿ, ಜಿಲ್ಲಾಧ್ಯಕ್ಷ ಮಹಾಂತೇಶ ಬೆಳಧಡಿ, ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣ ಪರಾಪುರ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಸುಜಾತಾ ದೊಡ್ಡಮನಿ, ನಗರಸಭೆ ಸದಸ್ಯ ಬಿ.ಬಿ. ಅಸೂಟಿ, ಮಂಜುನಾಥ ಪೂಜಾರ, ಪನ್ನಾಬಾಯಿ ಬಾಗಡೆ, ಅಮೃತಾ ಪಾಟೀಲ, ನಗರಸಭೆ ಸದಸ್ಯ ಅನೀಲ ಗರಗ, ಬರ್ಕತಲಿ ಮುಲ್ಲಾ, ಕೆಪಿಸಿಸಿ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿ ಉಮರ ಫಾರೂಕ್ ಹುಬ್ಬಳ್ಳಿ, ಯಲ್ಲಪ್ಪ ಚೌಡಣ್ಣವರ, ಅಂದಪ್ಪ ದಾಸ್ವಾಲ, ಚಂದಪ್ಪ ಬಾವಿಮನಿ, ಬಸವರಾಜ ರಾಮೇನಹಳ್ಳಿ, ರಾಮಕ್ಕ ಕಟ್ಟಿಮನಿ, ವೀಣಾ ಕಟ್ನಳ್ಳಿ, ಮಮ್ತಾಜ ಶಿರಕೋಳ, ಹಸೀನಾ ನಾಯ್ಕರ, ಸುಮಾ ಬಾರಕೇರ, ದ್ರಾಕ್ಷಾಯಿಣಿ ಮೂರಶಿಳ್ಳಿನ, ಹೊಳಬಸಪ್ಪ ಅಕ್ಕಿ, ಚಾಂದ ಕೊಟ್ಟೂರ, ಪರಶುರಾಮ ಬಳ್ಳಾರಿ, ಶಿವಪ್ಪ ಮಾದರ, ಯುವರಾಜ ವಾಲಿ, ವಿನಾಯಕ ಬಳ್ಳಾರಿ, ಮಹಾಂತೇಶ ಕಣವಿ, ಕೆಂಚಪ್ಪ ಪೂಜಾರ, ರಾಚಪ್ಪ ಗಡಾದ, ದೇವಪ್ಪ ಲಮಾಣಿ, ಶಿವಪ್ಪ ಹರತಾಳ, ರಿಯಾಜ ಬಬರ್ಚಿ, ಪ್ರಕಾಶ ಕಣಗಿನಹಾಳ, ಸೋಮನಗೌಡ ಪಾಟೀಲ, ಪರಪ್ಪ ಕಮತರ, ತಯೂಬ ಕುನ್ನಿಬಾಯಿ, ರಫೀಕ ಅಬ್ಬಿಗೇರಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement