ಶಿವಸೇನೆ ಕಾರ್ಯಕರ್ತರ ಮೇಲೆ ಕ್ರಮಕ್ಕೆ ಆಗ್ರಹ
ಗದಗ: ಕನ್ನಡಿಗರನ್ನು ಹಾಗೂ ಕನ್ನಡಾಂಬೆಯನ್ನು ಅವಮಾನಿಸಿರುವ ಎಂ.ಇ.ಎಸ್. ಹಾಗೂ ಶಿವಸೇನೆ ಕಾರ್ಯಕರ್ತರ ಮೇಲೆ ಕಠೀಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ್ರ ನೇತೃತ್ವದಲ್ಲಿ ಶನಿವಾರ ಕರವೇ ಕಾರ್ಯಕರ್ತರು ಬೆಳಗಾವಿಗೆ ಹೋಗುತ್ತಿರುವ ಸಂದರ್ಭದಲ್ಲಿ ಹುಬ್ಬಳ್ಳಿ ಬಳಿ ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಜಯಕುಮಾರ ಬ್ಯಾಳಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಿಂಗನಗೌಡ ಮಾಲೀಪಾಟೀಲ, ರಜಿಯಾಬೇಗಂ ಮುಲ್ಲಾ, ಮುನ್ನಾ ಪಟ್ಟಣ, ಮಹಾದೇವಿ ದೊಡ್ಡಗೌಡ್ರ, ಪ್ರಕಾಶ ಸಂದಿಗೌಡ್ರ, ಕಲಂದರ ಖಾಜಿ, ಕೃಷ್ಣ ಲಮಾಣಿ, ಗುರು ಮರಾಠಿ, ವೀರೇಶ ಮುಳಗುಂದ, ಜಗದೀಶ ತಳವಾರ, ರಾಘವೇಂದ್ರ ಮುಳಗುಂದ, ಬಸವರಾಜ ಅಂಗಡಿ, ರವಿ ಮಡಿವಾಳರ, ಕಿರಣ ಕೋರಗಾವ್, ಜಾವೀದ ಖಾಜಿ, ಅಷಪಾಕ್ ಖಾಜಿ, ಸುನೀಲ ಕಾಟವಾ, ಸಿಕಂದರ ಇದ್ದರು.