ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆಸರು ರಸ್ತೆಗಳು: ಗ್ರಾಮಸ್ಥರ ಆಕ್ರೋಶ

Mainashree
Updated On : 4 Aug 2014, 9:47 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 3
ಎಲ್ಲಿ ನೋಡಿದಲ್ಲಿ ಕೆಸರು ತುಂಬಿದ ರಸ್ತೆಗಳು ಸ್ವಲ್ಪ ಆಯ ತಪ್ಪಿದರೆ ಜಾರಿ ಬೀಳುವುದು ನಿಶ್ಚಿತ. ವೃದ್ಧರು, ಮಕ್ಕಳು, ಮಹಿಳೆಯರು ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಗ್ರಾಪಂ ಅಧಿಕಾರಿಗಳು ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಸುವರ್ಣಗಿರಿ ತಾಂಡಾದ ಸಕ್ರಪ್ಪ ಲಮಾಣಿ ತಮ್ಮ ಆಕ್ರೋಶ ವ್ಯಕ್ತಪಡಿದರು.
ಅವರು ಸುವರ್ಣಗಿರಿ ತಾಂಡಾದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಶೀಘ್ರವೇ ನಮ್ಮೂರಿನ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮಕ್ಕೆ ಬಸ್ ಸೌಲಭ್ಯವು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗರ್ಭಿಣಿಯರು, ಅನಾರೋಗ್ಯ ಪೀಡಿತರಿಗೆ ತುಂಬಾ ತೊಂದರೆಯಾಗಿದೆ. ಗ್ರಾಮದಲ್ಲಿ ಪಶುಚಿಕಿತ್ಸಾಲಯ ಇಲ್ಲದೇ ಇರುವುದರಿಂದ ಜಾನುವಾರುಗಳಿಗೆ ಬರುವ ರೋಗಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಹಾಯಕರು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಇಲ್ಲದೇ ಇರುವುದರಿಂದ ಕಡು ಬಡವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಗ್ರಂಥಾಲಯ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಗಾಳಿ ಕೊಟ್ರೇಶ ಮಾತನಾಡಿ, ನಿಮ್ಮ ಗ್ರಾಮದ ರಸ್ತೆ, ಚರಂಡಿ ಸುಧಾರಿಸಲು ಶೀಘ್ರ ಕ್ರಮ ಕೈಗೊಳ್ಳಲು ಪಿಡಿಒ ಅವರಿಗೆ ಆದೇಶ ನೀಡುತ್ತೇವೆ. ಪಶು ಚಿಕಿತ್ಸಕರು ವಾರದಲ್ಲಿ 2-3 ಬಾರಿ ಗ್ರಾಮಕ್ಕೆ ಭೇಟಿ ನೀಡುವಂತೆ ಮಾಡುತ್ತೇವೆ. ಪಡಿತರ ಚೀಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದು ಸೆಪ್ಟೆಂಬರ್ ನಂತರ ಹೊಸ ಪಡಿತರ ಚೀಟಿಗಳನ್ನು ನೀಡುವ ಕ್ರಿಯೆ ಮತ್ತೆ ಪ್ರಾರಂಭವಾಗುತ್ತದೆ ಎಂದರು.
ಶಿರಹಟ್ಟಿ ತಾಲೂಕು ಪಂ ಇಒ ನಾರಾಯಣಸ್ವಾಮಿ, ಬಿಇಒ ಆರ್.ಎಸ್. ಬುರುಡಿ, ಲಕ್ಷ್ಮೇಶ್ವರದ ತಹಸೀಲ್ದಾರ್ ಎಚ್.ಎಂ. ದಂಡಿನ, ಗ್ರಾಪಂ ಅಧ್ಯಕ್ಷೆ ಚಂದ್ರವ್ವ ಲಮಾಣಿ, ತಾಪಂ ಸದಸ್ಯ ಕೊಟೆಪ್ಪ ವರ್ದಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ, ಅಬಕಾರಿ ನಿರೀಕ್ಷಕ ಆರ್.ಎಂ. ಚಿಕ್ಕಣ್ಣವರ, ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ, ಪಿಎಸ್‌ಐ ವಿಕಾಸ ಲಮಾಣಿ, ಪಿಡಿಒ ಹನುಮಂತಪ್ಪ ಹಾಗೂ ಗ್ರಾಪಂ ಸದಸ್ಯ ಶಂಕರ ಪೂಜಾರ, ಗೀತಾ ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement