ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿಭಾವಂತರ ಪ್ರತಿಭೆ ದೇಶಕ್ಕೆ ಅರ್ಪಣೆಯಾಗಲಿ

Mainashree
Updated On : 4 Aug 2014, 9:47 am

ನರೇಗಲ್ಲ: ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ತಾಂತ್ರಿಕ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೇಯಸ್ಸು ನಮ್ಮದು. ದುಖಃದ ಸಂಗತಿ ಎಂದರೆ ನಮ್ಮ ದೇಶದ ಬಹುತೇಕ ಪ್ರತಿಭಾವಂತರು ವಿದೇಶಕ್ಕೆ ಮಾರುಹೋಗಿರುವುದು. ಪ್ರತಿಭಾವಂತರು ತಮ್ಮ ಪ್ರತಿಭೆಯ ಗೌರವವನ್ನು ಕಾಪಾಡಬೇಕು. ಪ್ರತಿಭಾವಂತರ ಪ್ರತಿಭೆ ನಮ್ಮ ದೇಶಕ್ಕೆ ಅರ್ಪಣೆಯಾಗಬೇಕು ಎಂದು ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಶ್ರೀಗಳು ಹೇಳಿದರು.
ಅವರು ಸಮೀಪದ ಹಾಲಕೆರೆ ಗ್ರಾಮದಲ್ಲಿ ಏರ್ಪಡಿಸಿದ ಮಹಾತಪಸ್ವಿ ಹಿರಿಯ ಅನ್ನದಾನ ಶ್ರೀಗಳ ಪುಣ್ಯಾರಾಧನೆಯ ಶತಮಾನೋತ್ಸವ 3ನೇ ದಿನವಾದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇಶದ ಭವಿಷ್ಯ ಅಲ್ಲಿನ ಪ್ರತಿಭಾವಂತರನ್ನು ಅವಲಂಬಿಸಿರುತ್ತೆ. ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದ ಪ್ರತಿಭೆಗಳು ದೇಶದ ಸಂಪತ್ತು. ದೇಶ ಸೇವೆ ಮಾಡುವ ಮನೋಭಾವ ಪ್ರತಿಭಾವಂತರಲ್ಲಿ ಇರಬೇಕಾಗುತ್ತದೆ ಎಂದರು.
ಸನ್ಮಾನ: ಶರಣರ ಸ್ಮರಣೆ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಕಾಪಾಡಿದಂತೆ ಈ ಹಿನ್ನೆಲೆಯಲ್ಲಿ ಹಾಲಕೆರೆಯ ಈಗಿನ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ತಮ್ಮ ಗುರುಗಳ ಪರಂಪರೆಯಲ್ಲಿ ಮುನ್ನಡೆಯುವ ಮೂಲಕ ಶ್ರೀಮಠದ ಗೌರವವನ್ನು ಉತ್ತಂಗಕ್ಕೇರಿಸಿದ್ದಾರೆ. ಈ ಭಾಗದ ಭಕ್ತರೂಕೂಡ ಶ್ರೀಮಠ ಹಾಗೂ ಪೂಜ್ಯರ ಸ್ಮರಣೆಯನ್ನು ಶ್ರದ್ಧಾಭಕ್ತಿಯಿಂದ ಮಾಡುವುದು ಮಾದರಿ ಎಂದರು. ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಅನ್ನದಾನ ಶ್ರೀ, ಸನ್ನಿಧಾನ ವಹಿಸಿದ್ದ ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಎಂ.ಕೆ. ಪಟ್ಟಣಶೆಟ್ಟಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಮಹಾಂತೇಶ ಕೌಜಲಗಿ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಿ.ಎಸ್. ಪಾಟೀಲ ಇದ್ದರು. ರಾಜ್ಯದಲ್ಲಿ ಪಿಯುಸಿ ವಿಭಾಗದಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕಗಳಿಸಿದ 200ಕ್ಕೂ ಹೆಚ್ಚು ವಿದ್ಯಾಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement