ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿಯೊಬ್ಬರೂ ವೃಕ್ಷ ಸಂತಾನಕ್ಕೆ ಗಮನ ನೀಡಿ ಶಿವಮೂರ್ತಿ ಶರಣರು

Mainashree
Updated On : 4 Aug 2014, 9:48 am

ನರೇಗಲ್ಲ: ಮನುಷ್ಯ ತನ್ನ ಸಂತಾನ ವೃದ್ಧಿಗಾಗಿ ಪರಿತಪಿಸುತ್ತಾನೆ. ಈ ಸಂತಾನವನ್ನು ಬೆಳೆಸಲು ಇನ್ನಿಲ್ಲದ ಕಾಳಜಿ ತೋರುವ ಮನುಷ್ಯ ಮುಂದೆ ಈ ಸಂತಾನಕ್ಕೆ ಬದುಕಲು ಬೇಕಾದ ವಾತಾವರಣದ ಬಗ್ಗೆ ಯೋಚಿಸುವುದಿಲ್ಲ. ಇದರಿಂದ ನಾವಿಂದು ಮಳೆ ಕೊರತೆ ಎದುರಿಸುತ್ತಿದ್ದೇವೆ. ಇದನ್ನು ತಪ್ಪಿಸಲು ಎಲ್ಲರೂ ವೃಕ್ಷ ಸಂತಾನಕ್ಕೆ ಮುಂದಾಗಬೇಕೆಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಶರಣರು ಹೇಳಿದರು.
ಅವರು ಸಮೀಪದ ಹಾಲಕೆರೆಯಲ್ಲಿ ನಡೆದಿರುವ ಹಿರಿಯ ಅನ್ನದಾನ ಶ್ರೀಗಳ ಪುಣ್ಯಾರಾಧನೆಯ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ನಡೆದ ಜೈವಿಕ ಇಂಧನ ತಜ್ಞರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ದನಿಯೆತ್ತಿದವರು ಈ ಶ್ರೀಗಳು. ಆಂತರ್ಯದಲ್ಲಿ ಹೆಚ್ಚಾಗಲು ಕ್ರೌರ್ಯ ಇದಕ್ಕೆ ಕಾರಣ. ಅಂಥವರಿಗೆ ನೈತಿಕ, ಅಧ್ಯಾತ್ಮ ಪಾಠ ನೀಡಿ ರಾಕ್ಷಸಿ ಪ್ರವೃತ್ತಿ ಹೋಗಲಾಡಿಸಲು ಯತ್ನಿಸಿ ಎಂದರು. ಸಾನ್ನಿಧ್ಯ ವಹಿಸಿದ್ದ ಮುಂಡರಗಿಯ ಡಾ. ಅನ್ನದಾನ ಶ್ರೀ ಆಶೀರ್ವಚನ ನೀಡಿದರು. ಜ. ಪಂಚಮ ಶಿವಲಿಂಗ ಶ್ರೀ ನೇತೃತ್ವ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement