ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೂತನ ರೈಲು ಮಾರ್ಗಕ್ಕಾಗಿ ಒತ್ತಾಯಿಸಿ ದೆಹಲಿ ಚಲೋ

Vishwanath S
Updated On : 2 Feb 2014, 12:05 pm

ಮುಂಡರಗಿ: ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಕಾರ್ಯಕರ್ತರು ಗದಗದಿಂದ ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೂತನ ರೇಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ದೆಹಲಿಯ ಜಂತರ್ ಮಂಥರ್ ಎದುರು ಫೆ. 3ರಂದು ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದರಿಂದ ಶನಿವಾರ ಬೆಳಗ್ಗೆ ಮುಂಡರಗಿಯಿಂದ ದೆಹಲಿ ಚಲೋ ಕಾರ್ಯಕ್ರಮಕ್ಕೆ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು.
ವೈ.ಎನ್. ಗೌಡರ ಮಾತನಾಡಿ, ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರಿಗೆ ರೇಲ್ವೆ ಹೋರಾಟದ ಕುರಿತು ಇರುವ ಖಾಳಜಿ, ಉತ್ಸಾಹ ಗದಗ, ಬಳ್ಳಾರಿ, ಬಾಗಲಕೋಟೆ, ಬಿಜಾಪೂರ ಶಾಸಕರಿಗೆ, ಸಂಸದರಿಗೆ ಇದ್ದಿದ್ದರೆ ಹೋರಾಟಕ್ಕೆ ಮತ್ತಷ್ಟು ಬೆಲೆ ಬರುತ್ತಿತ್ತು. ಜನಪ್ರತಿನಿಧಿಗಳ ಈ ಧೋರಣೆ ಖಂಡನೀಯ ಎಂದರು.
ಈ ಮಾರ್ಗದಲ್ಲಿ ರೇಲ್ವೆ ಪ್ರಾರಂಭಿಸುವುದರಿಂದ ಬೆಂಗಳೂರಿಗೆ ತೆರಳುವವರಿಗೆ ಸುಮಾರು 80ರಿಂದ 90 ಕಿಮೀ ಹತ್ತಿರವಾಗಲಿದೆ. ಇಲ್ಲಿ ರೇಲ್ವೆ ಮಾರ್ಗ ಪ್ರಾರಂಭವಾಗುವುದರಿಂದ ಈ ಭಾಗದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಆದ್ದರಿಂದ ಪ್ರಸಕ್ತ ರೇಲ್ವೆ ಬಜೆಟ್‌ನಲ್ಲಿ ಗದಗ, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ಹೋಗುವ ರೇಲ್ವೆ ಮಾರ್ಗದ ಕುರಿತು ಸೇರಿಸಬೇಕೆಂದು ಆಗ್ರಹಿಸಿದರು.
ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, 2009ರಿಂದ ಇಲ್ಲಿಯವರೆಗೆ ಅನೇಕ ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ರೇಲ್ವೆ ಸಚಿವರು, ರೇಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಬರೆದರೂ ಯಾರಿಂದಲೂ ಈ ಹೋರಾಟದ ಕುರಿತು ಸರಿಯಾದ ಸ್ಪಂದನೆ ಇಲ್ಲ. ಅದರಿಂದಾಗಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಎಲ್ಲ ಮನವಿ ಹಾಗೂ ಕಾಗದ ಪತ್ರಗಳನ್ನು ಮುಂಡರಗಿ ತಹಸೀಲ್ದಾರ್ ಕಚೇರಿ ಎದುರು ಬೆಂಕಿಹಾಕಿ ಸುಡುವ ಮೂಲಕ ಪ್ರತಿಭಟಿಸಲಾಗಿತ್ತು. ಇದೀಗ ದೆಹಲಿಗೆ ತೆರಳಿ ಅಂದು ಸುಟ್ಟಂತಹ ಎಲ್ಲ ಕಾಗದ ಪತ್ರಗಳ ಚಿತಾಭಸ್ಮವನ್ನು ದೆಹಲಿಯಲ್ಲಿ ಇಟ್ಟುಕೊಂಡು ಕುಳಿತು ಪ್ರತಿಭಟನೆ ನಡೆಸಿ ನಂತರ ಅದನ್ನು ಯಮುನಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದರು.
ಯಮನಪ್ಪ ಭಜಂತ್ರಿ, ಶ್ರೀಕಾಂತಗೌಡ ಪಾಟೀಲ, ಚಂದ್ರಕಾಂತ ಮಟ್ಟಿ, ಬಸಪ್ಪ ವಡ್ಡರ, ಕೊಟ್ರಗೌಡ ಪಾಟೀಲ, ಮೋಹನಗೌಡ ಪಾಟೀಲ, ಆನಂದ ಬನ್ನಿಕೊಪ್ಪ, ರವಿಗೌಡ ಪಾಟೀಲ, ಸತ್ಯಪ್ಪ ಕುರುಗೋಡಿ, ಅಂದಾನಗೌಡ ಕುಲಕರ್ಣಿ, ಮಲ್ಲಪ್ಪ ಹೊರ್ಲಹಳ್ಳಿ, ಬಸವರಾಜ ಮತ್ತೂರ, ಬಸವರಾಜ ಹೂಗಾರ, ದುರಗಪ್ಪ ಪೂಜಾರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement