ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಪನ್ಯಾಸಕರ ನೇಮಕಾತಿಗೆ ಅಡತಡೆ ನಿವಾರಣೆ

Mainashree
Updated On : 4 Feb 2014, 11:06 am

ಗದಗ: ಈ ಹಿಂದೆ ಉಪನ್ಯಾಸಕರ ನೇಮಕಾತಿಗೆ ಇದ್ದ ಅಡತಡೆಗಳು ಈಗ ನಿವಾರಣೆಯಾಗಿವೆ ಎಂದು ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವ ಅಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಖಾಸಗಿ ಅನುದಾನಿತ ಪಪೂ ಕಾಲೇಜುಗಳಲ್ಲಿ ಜನವರಿ 2013ರ ವರೆಗೆ ನಿವೃತ್ತಿ, ನಿಧನ, ರಾಜಿನಾಮೆಯಿಂದ ಖಾಲಿಯಾಗಿದ್ದ ಸುಮಾರು 291 ಹುದ್ದೆಗಳನ್ನು ತುಂಬಿಕೊಳ್ಳುವಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಭಾರತ ಸಂವಿಧಾನ ಅನುಚ್ಛೇದ 371ಜೆ ಇದರ ತಿದ್ದುಪಡಿಯಿಂದಾಗಿ ಕಾನೂನಿನ ತೊಡಕಾಗಿತ್ತು. ಈ ಸಮಸ್ಯೆ ಕುರಿತು ಹೈದರಾಬಾದ್ ಕರ್ನಾಟಕ ವಿಶೇಷ ಇಲಾಖೆಯು ಸಕಾರಾತ್ಮಕ ಸ್ಪಷ್ಟೀಕರಣ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಆಡಳಿತ ಮಂಡಳಿಗೆ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಲು ಪಪೂ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ವಿಶೇಷ ಇಲಾಖೆಯು ನೀಡಿದ ಸ್ಪಷ್ಟೀಕರಣದಂತೆ ಹೈ.ಕ. ವ್ಯಾಪ್ತಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳು ಮಾತ್ರ ಈ ಕಾನೂನಿನ ಅಡಿಯಲ್ಲಿ ಬರುತ್ತಿದ್ದು, ಅದರ ವ್ಯಾಪ್ತಿಯ ಹೊರಗೆ ಇರುವ ಶಿಕ್ಷಣ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ. ಈ ಸ್ಪಷ್ಟೀಕರಣದಿಂದ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಹೊರಗೆ ಇರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಸಹಾಯವಾಗಿರುವುದು. ಸರ್ಕಾರದ ಈ ಕಾರ್ಯ ಶ್ಲಾಘನೀಯ ಎಂದು ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪ್ರಾ. ಲಿಂಗಯ್ಯ ಹಿರೇಮಠ, ಕಾರ್ಯಕಾರಿ ಸಮಿತಿಯ ಸದಸ್ಯ ಎಸ್.ಎನ್. ಮಳಲಿ, ಜಿ.ಎಂ. ಹಕಾರಿ, ಆರ್. ಈಶ್ವರಶೆಟ್ಟರ್, ಆರ್.ಎಫ್. ರಿತ್ತಿ ಹಾಗೂ ಗದಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಪ್ರಾ. ಎಂ.ಸಿ. ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಅಶೋಕ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement