ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಕರವೇ ಮನವಿ

Mainashree
Updated On : 4 Feb 2014, 10:33 am

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪುರಸಭೆಯ ಕಚೇರಿಯ ಮುಂದೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ಇದು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಜರುಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಯ ವತಿಯಿಂದ ಈಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇಶದ ಗೌರವದ ಪ್ರತೀಕವಾದ ರಾಷ್ಟ್ರಧ್ವಜವನ್ನು ಗೌರವಿಸಬೇಕಾದ ಹಾಗೂ ಅದು ಸೂಕ್ತ ರೀತಿಯಲ್ಲಿ ಧ್ವಜಾರೋಹಣ ಮಾಡಿಸುವ ಜವಾಬ್ದಾರಿ ಆಯಾ ಮಟ್ಟದ ಅಧಿಕಾರಿಗಳಿಗೆ ಇರುತ್ತದೆ. ಆದರೆ, ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಜ. 26ರಂದು ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗುವಂತೆ ಹಾರಿಸಿದ್ದು, ಇದು ಅವರ ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಕ್ರಮ ಕೈಗೊಂಡು ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ನಿಂಗನಗೌಡ ಮಾಲಿಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣು ಗೋಡಿ, ನಿಂಗಪ್ಪ ಹೊನ್ನಾಪುರ, ಮಹಾಂತೇಶ ರಗಟ್ಟಿ, ತನ್ವೀರ ಮುಳಗುಂದ, ಅಜೀಂ ಖಾಜಿ, ಸಾಹಿಲ್ ನವಲಗುಂದ, ಮೆಹಬೂಬ ಕುರ್ತಕೋಟಿ, ಮೌಲಾಸಾಬ ಕುಂದಗೋಳ, ರಮೇಶ ಕಾಟಿ, ನಾಗೇಶ ಅಮರಾಪುರ, ವಿನಾಯಕ ಪಾಟೀಲ, ಪ್ರಕಾಶ ಕೊಂಚಿಗೇರಿಮಠ, ಎಚ್.ಎಫ್. ಪಾಟೀಲ, ಗಣೇಶ ಕುಂಬಾರ, ಎಂ.ಎಸ್. ಅಕ್ಕಿ, ಸಂತೋಷ ಹೂಗಾರ, ರುದ್ರಪ್ಪ ಮಾಯಾಚಾರಿ, ಕಲ್ಮೇಶ ಕಲ್ಲಣ್ಣವರ, ಪ್ರಕಾಶ ಡಂಬಳ, ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement