ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೊನ್ನಾಪುರದಲ್ಲಿ ಶಿವಶಾಂತವೀರ ಶರಣರಿಂದ ಸದ್ಭಾವ ಯಾತ್ರೆ

Mainashree
Updated On : 4 Feb 2014, 11:06 am

ಗದಗ: ಜಿಲ್ಲೆಯ ರೋಣ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಸೋಮವಾರ ಬಳಗಾನೂರಿನ ಚನ್ನವೀರ ಶರಣರ ಮಠದ ಜಾತ್ರಾ ಮಹೋತ್ಸವ ಮತ್ತು ಚನ್ನವೀರ ಶರಣರ 19ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹೊನ್ನಾಪುರ ಗ್ರಾಮದಲ್ಲಿ ಸದ್ಭಾವ ಯಾತ್ರೆ ಹಾಗೂ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆಯ ಜನ ಜಾಗೃತಿ ಆಂದೋಲನ ಜರುಗಿತು.
ಸನ್ನಿಧಾನ ವಹಿಸಿದ ಹೊಸಳ್ಳಿಯ ಬೂದೀಶ್ವರ ಶ್ರೀಗಳು ಆಶೀರ್ವಚನ ನೀಡಿ, ಮನುಷ್ಯನ ಹುಟ್ಟು ಸಾವಿನ ಮಧ್ಯದ ಬದುಕು ಬಹು ದೊಡ್ಡದು. ಇಂತಹ ಅಪರೂಪದ ಬೆಲೆ ಕಟ್ಟಲಾಗದ ಮನುಷ್ಯ ಜನ್ಮವನ್ನು ಭಕ್ತಿರಸದ ಮೂಲಕ ಸಾರ್ಥಕಗೊಳಿಸಿಕೊಳ್ಳಬೇಕು. ಮೋಸ, ವಂಚನೆ, ಕಪಟ, ಅನ್ಯಾಯ, ಅತ್ಯಾಚಾರ ಮೊದಲಾದ ದುರ್ಗುಣಗಳನ್ನು ದೂರವಾಗಿಸಿ, ಸಾಮರಸ್ಯದಿಂದ ಬದುಕುವುದು ಅವಶ್ಯವೆಂದು ಆಶೀರ್ವಚನ ನೀಡಿದರು. ನೇತೃತ್ವ ವಹಿಸಿದ್ದ ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಮನುಷ್ಯ ನ್ಯಾಯ ನೀತಿ, ಧರ್ಮದ ತಳಹದಿಯ ಮೇಲೆ ಜೀವನ ಸಾಗಿಸಿ ಉತ್ತಮ ಆಚಾರ ವಿಚಾರಗಳಿಂದ ಸಜ್ಜನರಾಗಿ ಬಾಳುವುದು ಇಂದಿನ ಅವಶ್ಯಕತೆ ಎಂದರು.
ಕೊಪ್ಪಳದ ಸಿದ್ಧಲಿಂಗ ದೇವರು ಮಾತನಾಡಿ, ಭಕ್ತಿ ಪರಂಪರೆ ಮುಂದುವರಿಸಿಕೊಂಡು ಬರುವಂತೆ ತಿಳಿಸಿದರು. ಎಂ. ಕಲ್ಲಿನಾಥ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗ ಶಾಸ್ತ್ರಿ ಸಿದ್ದಾಪುರ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಸಹನಾ ಪಾಟೀಲ ಹಾಗೂ ನಿರ್ಮಲಾ ಸಂಗಡಿಗರು ಪ್ರಾರ್ಥಿಸಿದರು. ಹೊಂಬಳ ಶಂಕರಲಿಂಗ ಭಜನಾ ಸಂಘ ಹಾಗೂ ಸುಮಂಗಲೆಯರ ಪೂರ್ಣಕುಂಭದ ಮೆರವಣಿಗೆ ವಿಶೇಷ ಗಮನ ಸೆಳೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement