ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ದೈಹಿಕ ಸದೃಢತೆ ಅತ್ಯವಶ್ಯ: ದೊಡ್ಡಮನಿ

Lingaraj Badiger
Updated On : 6 Feb 2014, 1:50 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 5
ಮಕ್ಕಳು ದೈಹಿಕವಾಗಿ ಸದೃಢವಾಗಿರುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ  ಹೇಳಿದರು.
ಅವರು ಸಮೀಪದ ಗೊಜನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸೋಮವಾರ ಶಾಲಾ ಅಭಿವೃದ್ಧಿ ಅನುದಾನ ಯೋಜನೆಯಡಿಯಲ್ಲಿ ಶಾಲಾ ಮೈದಾನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರ ಉತ್ತಮ ಶಿಕ್ಷಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಯಾವುದೇ ರೀತಿಯಲ್ಲಿ ಹಿಂದುಳಿಯಬಾರದು ಎಂದು ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಪಾಠದ ಜತೆಗೆ ದೈಹಿಕವಾಗಿ ಸದೃಢರಾಗಲು ಆಟದ ಅವಶ್ಯಕತೆ ಇದೆ. ಮಕ್ಕಳಿಗಾಗಿ ಶಾಲೆಗಳಲ್ಲಿ ಮೈದಾನ ನಿರ್ಮಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಕ್ಷೇತ್ರ ವ್ಯಾಪ್ತಿಯ ಹಲವಾರು ಶಾಲೆಗಳಲ್ಲಿ ಮೈದಾನ ನಿರ್ಮಿಸುವ ಕಾರ್ಯ ಕೈಗೆತ್ತಿಗೊಳ್ಳಲಾಗುತ್ತಿದೆ. ಶಾಲೆಗಳಲ್ಲಿನ ಮಕ್ಕಳು ಆಟ ಪಾಠಗಳ ನಡುವೆ ಉಲ್ಲಾಸದಿಂದ ಶಾಲೆಗೆ ಬರುವಂತಾಗುವಂತೆ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಗೊಜನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಉತ್ತಮ ವಾತಾವರಣದಲ್ಲಿ ಅತಿದೊಡ್ಡ ಜಾಗೆಯನ್ನು ಹೊಂದಿದ ಶಾಲೆಯಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಲೆಗೆ ಕೊರತೆ ಇದ್ದ ಮೈದಾನ ನಿರ್ಮಿಸಲು ಸರ್ಕಾರ ನೆರವು ನೀಡುತ್ತಿದೆ. ಗೊಜನೂರು ಸರ್ಕಾರಿ ಪ್ರೌಢಶಾಲೆಯು ಒಟ್ಟು 5 ಎಕರೆ ಪ್ರದೇಶ ಹೊಂದಿದ್ದು, ಅದರಲ್ಲಿ ಸುಮಾರು 2.5 ಎಕರೆ ಪ್ರದೇಶದಲ್ಲಿ ಮೈದಾನ ಸಿದ್ಧವಾಗಲಿದೆ. ಈ ಭಾಗದಲ್ಲಿಯೇ ಬೃಹತ್ ಮೈದಾನವಾಗುವ ನಿಟ್ಟಿನಲ್ಲಿ ಈ ಕಾಮಗಾರಿಗೆ ಗ್ರಾಮಸ್ಥರು ಹೆಚ್ಚು ಆಸಕ್ತಿಯಿಂದ ಅನುದಾನ ತರುವಲ್ಲಿ ಗಮನ ಸೆಳೆದಿರುವುದುಗಿ ತಿಳಿಸಿದರು.
ಕೆಎಂಎಫ್ ನಿರ್ದೇಶಕ ಎಸ್.ಪಿ. ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಡಿ. ಪಾಟೀಲ, ಚಂದ್ರಗೌಡ ಪಾಟೀಲ, ಗಂಗನಗೌಡ್ರ ಪಾಟೀಲ, ಶಂಕರಗೌಡ್ರ ದೊಡ್ಡಗೌಡ್ರ, ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರೆಣ್ಣವರ, ಶಂಕ್ರಮ್ಮ ಜಾಲಮ್ಮನವರ, ಪಿಡಿಒ ನದಾಫ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ, ಡಿ.ಎನ್. ಮೂಲಿಮನಿ, ಜಿಪಂ ಉಪಕಾರ್ಯದರ್ಶಿ ಷಡಕ್ಷರಪ್ಪ ಮುಂತಾದವರು ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement