ಪಾಲಕರ ದಿನಾಚರಣೆ, ವಾರ್ಷಿಕ ಸ್ನೇಹ ಸಮ್ಮೇಳನ
ಮುಂಡರಗಿ: ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆ, ವಿ.ಜಿ. ಲಿಂಬಿಕಾಯಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸರಸ್ವತಮ್ಮ ಲಿಂಬಿಕಾಯಿ ಪೂರ್ವ ಪ್ರಾಥಮಿಕ ಶಾಲೆಗಳ ಪಾಲಕರ ದಿನಾಚರಣೆ, ಸ್ನೇಹ ಸಮ್ಮೇಳನ ಫೆ. 7 ಮತ್ತು 8ರಂದು ನಡೆಯಲಿದೆ. ಫೆ. 7ರ ಸಂಜೆ 4.30ಕ್ಕೆ ಪಾಲಕರ ದಿನಾಚರಣೆ, ಚಿತ್ರಕಲಾ ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ, ಸನ್ಮಾನ, ಪಾರಿತೋಷಕ ವಿತರಣಾ ಸಮಾರಂಭ ಜರುಗಲಿದೆ.
ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ
ನರಗುಂದ: ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರ ತಾಲೂಕಿನ ಕಣಕಿಕೊಪ್ಪದಲ್ಲಿ ಫೆ. 7ರ ಸಂಜೆ 5.30ಕ್ಕೆ ಆರಂಭವಾಗಲಿದೆ.