ಯುವಕರು ಕಲೆ, ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿ
ಮುಂಡರಗಿ: ಯುವಕರು ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಬೆಃವಣಿಗೆಗೆ ಶ್ರಮಿಸುವುದು ಅಗತ್ಯವಾಗಿದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಈಚೆಗೆ ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಕಲಾ ಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಶ್ರೀನಿವಾಸ ವೆಂಕಟಾದ್ರಿ ಬಹದ್ದೂರ ದೇಸಾಯಿ ಕಲಾ ಸಂಸ್ಕೃತಿಕ ವೇದಿಕೆ ಹಾಗೂ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಆಶ್ರಯದಲ್ಲಿ ನಡೆದ, ಶಿವಸಂಚಾರ ನಾಟಕೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕಲೆ, ಜಾತಿ, ಮತಗಳನ್ನು ಮೀರಿ ನಿಂತು ವಿಶ್ವವೇ ಬೆರಗಾಗುವಂತಹ ಕಲಾವಿದರು ಭಾರತದಲ್ಲಿದ್ದು, ಕಲಾವಿದರಿಗೆ ಸರ್ಕಾರ ಗೌರವ ನೀಡಿ ಮಾಸಾಶನ ಮಂಜೂರು ಮಾಡಬೇಕು. ಗ್ರಾಮೀಣ ಭಾಗದಲ್ಲಿ ಜನಪದ ಕಲೆ ಕಟ್ಟುವ ಕೆಲಸಕ್ಕೆ ಯುವ ಸಂಘಟನೆಗಳು ಮುಂದಾಗಬೇಕು ಎಂದರು.
ಜಿ.ವಿ. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಕಲಾವಿದರಾದ ಶಿವಸಂಚಾರ ನಾಟಕ ತಂಡದ ಸದಸ್ಯರನ್ನು ಹಾಗೂ ಸ್ಥಳೀಯ ಕಲಾವಿದ ರಂಗಪ್ಪ ಕಾಶಭೋವಿ, ಬಸಪ್ಪ ಮೂಕ ಬಸಪ್ಪನವರ, ಹನುಮಪ್ಪ ಕಾಶಭೋವಿ, ಲೆಂಕೆಪ್ಪ ಬಂಡಿ, ಮರಿತ್ಯಾಮಪ್ಪ ಆದಮ್ಮನವರ, ನಿಂಗಪ್ಪ ಗುಡ್ಡದ ಸೇರಿದಂತೆ 10 ಜನ ಕಲಾವಿದರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಯರಾಶಿ, ಡಿ.ಬಿ. ಡೋಲಿ, ಆನಂದಗೌಡ ಪಾಟೀಲ, ಆನಂದಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಎನ್.ಕೆ. ಮುಲ್ಲಾನವರ, ಪಾಲಾಕ್ಷಿ ಗಣದಿನ್ನಿ, ದಿಲೀಪ ಬನಸಾಲಿ, ವಿ.ಟಿ. ಮೇಟಿ, ಚನ್ನಪ್ಪ ಪ್ಯಾಟಿ ಉಪಸ್ಥಿತರಿದ್ದರು.