ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆರು ತಿಂಗಳಲ್ಲಿ ಜಿಲ್ಲೆಯ ಅಪೌಷ್ಟಿಕತೆ ನಿರ್ಮೂಲನೆ

Vishwanath S
Updated On : 9 Feb 2014, 1:07 am

ಕನ್ನಡಪ್ರಭ ವಾರ್ತೆ, ಗದಗ, ಫೆ. 8
ಮುಂಬರುವ 6 ತಿಂಗಳಲ್ಲಿ ಜಿಲ್ಲೆಯಲ್ಲಿ ವರದಿಯಾಗಿರುವ ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಸಂಜೆ ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ ಪ್ರಾರಂಭಿಸಲಾಗಿರುವ ತೀವ್ರತರ ಅಪೌಷ್ಟಿಕ ಮಕ್ಕಳ ಚಿಕಿತ್ಸಾ ಮತ್ತು ಪುನಶ್ಚೇತನ ಘಟಕ ಉದ್ಘಾಟಿಸಿ ಮಾತನಾಡಿದರು.
ಈ ಪ್ರಯತ್ನ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಇಲ್ಲಿ ಯಶಸ್ವಿಯಾದ ನಂತರ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ 1504 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಹಕಾರದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕೇಂದ್ರವು 25 ಹಾಸಿಗೆಗಳ ವ್ಯವಸ್ಥೆ ಹೊಂದಿದ್ದು, ನಗರದ ಖಾಸಗಿ ವೈದ್ಯರು ಮಂಗಳವಾರದಿಂದ ಶುಕ್ರವಾರದವರೆಗೆ (4 ದಿನ) ಉಚಿತವಾಗಿ ಈ ಮಕ್ಕಳ ತಪಸಾಣೆ ನಡೆಸಲು ಒಪ್ಪಿಕೊಂಡಿದ್ದನ್ನು ಸರ್ಕಾರದ ಪ್ರತಿನಿಧಿಯಾಗಿ ಅಭಿನಂದಿಸುತ್ತೇನೆ. ಪಾಲಕರ ನಿರ್ಲಕ್ಷ್ಯದಿಂದಾಗಿ ಈ ಕಾಯಿಲೆ ಹೆಚ್ಚಾಗುತ್ತಿರುವುದು ತನಿಖೆಯ ವೇಳೆಯಲ್ಲಿ ಬಹಿರಂಗಗೊಂಡಿದೆ. ಜಪಾನ್ ದೇಶದವರು ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಹಾಗೂ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕುಗಳನ್ನು ಗುರುತಿಸಿ, ತಲಾ ರು. 15 ಕೋಟಿ ನೀಡಿ ಮಕ್ಕಳಲ್ಲಿರುವ ಅಪೌಷ್ಟಿಕತೆ ಹೋಗಲಾಡಿಸಲು ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು. ರಾಜ್ಯದಲ್ಲಿರುವ ಒಟ್ಟು ಮಕ್ಕಳಲ್ಲಿ ಶೇ. 2ರಷ್ಟು ಮಕ್ಕಳಲ್ಲಿ ಈ ಅಪೌಷ್ಟಿಕತೆ ಕಂಡು ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿಎಚ್‌ಒ ಡಾ. ಡಿ.ಬಿ. ಚೆನ್ನಶೆಟ್ಟಿ, ಡಾ. ಆರ್.ಎನ್. ಪಾಟೀಲ, ಡಾ. ಜೆ.ಕೆ. ಲಾಖಾನಿ, ಡಾ. ಧನೇಶ ದೇಸಾಯಿ, ಡಾ. ಎಂ.ಬಿ. ನಿಂಬಣ್ಣವರ, ಡಾ. ಗಣೇಶ, ಡಾ. ಮಾನ್ವಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ ಮುಂತಾದವರು ಹಾಜರಿದ್ದರು.
ಈ ಪ್ರಯತ್ನ ರಾಜ್ಯದಲ್ಲಿ ಪ್ರಥಮವಾಗಿದ್ದು, ಇಲ್ಲಿ ಯಶಸ್ವಿಯಾದ ನಂತರ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ 1504 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಹಕಾರದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕೇಂದ್ರವು 25 ಹಾಸಿಗೆಗಳ ವ್ಯವಸ್ಥೆ ಹೊಂದಿದ್ದು, ನಗರದ ಖಾಸಗಿ ವೈದ್ಯರು ಮಂಗಳವಾರದಿಂದ ಶುಕ್ರವಾರದವರೆಗೆ (4 ದಿನ) ಉಚಿತವಾಗಿ ಈ ಮಕ್ಕಳ ತಪಸಾಣೆ ನಡೆಸಲು ಒಪ್ಪಿಕೊಂಡಿದ್ದನ್ನು ಸರ್ಕಾರದ ಪ್ರತಿನಿಧಿಯಾಗಿ ಅಭಿನಂದಿಸುತ್ತೇನೆ.
- ಎಚ್.ಕೆ. ಪಾಟೀಲ, ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement