ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಮಗಾರಿ ವಿಳಂಬ ಖಂಡಿಸಿ ಪತ್ರ ಚಳವಳಿ: ಸಿದ್ಧಲಿಂಗ ಶ್ರೀಗಳು

Mainashree
Updated On : 10 Feb 2014, 2:03 am

ನರಗುಂದ: ಕಳಸಾ-ಬಂಡೂರಿ ನಾಲಾಗಳನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸಿಬೇಕೆಂಬ ಈ ಭಾಗದ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸದೇ ಇರುವುದನ್ನು ಖಂಡಿಸಿ ಪತ್ರ ಚಳವಳಿ ನಡೆಸಲಾಗುತ್ತಿದೆ ಎಂದು ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಕೇಂದ್ರದ ಪ್ರಧಾನ ಮಂತ್ರಿಗೆ, ರಾಷ್ಟ್ರಪತಿಗೆ, ಮುಖ್ಯಮಂತ್ರಿಗೆ, ರಾಜ್ಯಪಾಲರಿಗೆ, ಕನ್ನಡ ಮತ್ತು ಇಂಗ್ಲಿಷ್‌ದಲ್ಲಿರುವ ಪತ್ರಗಳನ್ನು ರವಾನಿಸುವ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು. ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಈ ಜಿಲ್ಲೆಗಳ 9 ತಾಲೂಕಗಳಿಗೆ ಕಳಸಾ-ಬಂಡೂರಿ ನಾಲಾಗಳನ್ನು ಮಲಪ್ರಭೆಗೆ ಜೋಡಿಸಿದರೆ 12 ತಿಂಗಳು ಕುಡಿವ ನೀರಿನ ಬವಣೆ ನೀಗಲಿದೆ. ರೈತರ ನೀರಾವರಿ ಸೌಲಭ್ಯವೂ ಲಭ್ಯವಾಗಲಿದೆ ಎಂದರು. ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಈ ಯೋಜನೆ ಹಿಂದಿನ ಸರ್ಕಾರದಲ್ಲಿ ಸ್ವಲ್ಪ ಮಟ್ಟಿಗೆ ಕಾಮಗಾರಿ ನಡೆದಿತ್ತು. ಆದರೆ, ಈ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಂಪೂರ್ಣ ಈ ಯೋಜನೆ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದರು. ಈ ಸಂದರ್ಭದಲ್ಲಿ ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಪತ್ರವನ ಮಠದ ಗುರುಸಿದ್ಧವೀರ ಶ್ರೀಗಳು, ಕಾಡಸಿದ್ಧೇಶ್ವರ ಶ್ರೀಗಳು, ವೀರೇಶ ಶ್ರೀಗಳು, ಕಳಸಾ-ಬಂಡೂರಿ ಜಿಲ್ಲಾ ಅಧ್ಯಕ್ಷ ಬಸಣ್ಣಯ್ಯ ಹಿರೇಮಠ, ಬಸನಗೌಡ ಚಿಕ್ಕನಗೌಡ್ರ, ಚಳಪ್ಪ ನಾಯ್ಕರ, ರುದ್ರಪ್ಪ ಗಾಣಿಗೇರ, ನೀಲಕ್ಕೆ ಹಸಿಬಿ, ರಾಚಪ್ಪ ಕೋರಿ, ಚನ್ನು ನಂದಿ, ನಾಗರಾಜ ಚಿತ್ರಗಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷೆ ಶೋಭಾ ಚಲವಾದಿ, ಹುಬ್ಬಳ್ಳಿ ತಾಲೂಕು ಕರವೇ ಅಧ್ಯಕ್ಷ ಅಮೃತ ಇಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement