ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೀವನದಲ್ಲಿ ಸಾಮಾಜಿಕ ಮೌಲ್ಯ ಬೆಳೆಸಿಕೊಳ್ಳಿ

Mainashree
Updated On : 10 Feb 2014, 1:57 am

ನರೇಗಲ್ಲ: ಪ್ರತಿಯೊಬ್ಬರೂ ಜೀವನದಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡಲ್ಲಿ ಸಮಗ್ರವಾದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನರೇಗಲ್ಲ ಠಾಣೆಯ ಪಿಎಸ್ಐ ಎಲ್.ಕೆ. ಜೂಲಕಟ್ಟಿ ಹೇಳಿದರು.
ಅವರು ಈಚೆಗೆ ನ್ಯಾಷನಲ್ ಸ್ಕಿಲ್ ಡೆವಲ್ಪಮೆಂಟ್ ಕಾರ್ಪೊರೇಶನ್ ಹಾಗೂ ಸ್ಥಳೀಯ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ಕಿಲ್ ಡೆವಲ್ಪಮೆಂಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡಲು ಬರುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ಅಸ್ತಿತ್ವದಲ್ಲಿ ಬಂದಿರುವ ಇಂತಹ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಗೌಡ ಸಿ., ಮೈಂಡ್ ಸ್ಕಿಲ್ ಸಂಸ್ಥೆ ತರಬೇತುದಾರ ಸೈಯದ್ ಮಾತನಾಡಿದರು. ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ರಿಲೈನ್ಸ್ ಲೈಫ್ನ ಅಧಿಕಾರಿ ಮೇಘರಾಜ ಹಿರೇಮಠ, ಕಳಕಪ್ಪ ಬೇವಿನಕಟ್ಟಿ, ರಘುನಾಥ ಕೊಂಡಿ, ಎನ್.ಕೆ. ಬೇವಿನಕಟ್ಟಿ, ಉಪನ್ಯಾಸಕ ಬಿ.ಎಸ್. ಕಳಕೊಣ್ಣವರ, ಡಿ.ಎ. ಮಲ್ಲನಗೌಡ್ರ, ಈಶ್ವರ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು. ಶಿವಾನಂದ ಗೊಗೇರಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement