ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬರವಣಿಗೆ ಕಲೆ ರೂಢಿಸಿಕೊಳ್ಳಿ: ಪೊಲೀಸ್ಪಾಟೀಲ

Mainashree
Updated On : 10 Feb 2014, 1:58 am

ಗದಗ: ಕಂಪ್ಯೂಟರ್, ಮೊಬೈಲ್ಗಳ ಬಳಕೆಗಳಿಂದ ಬರೆಯುವ ಕ್ರಿಯೆ ಕಡಿಮೆಯಾಗಿದ್ದು, ಎಲ್ಲರೂ ಬರವಣಿಗೆ ಕಲೆಯನ್ನು ಉಳಿಸಿಕೊಳ್ಳಬೇಕು ಎಂದು ಮುಂಡರಗಿ ಕ.ರಾ.ಬೆಲ್ಲದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ಹೇಳಿದರು.
ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು ಕಾಲೇಜಿನ ಸಭಾ ಭವನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಕನ್ನಡ ಅಭಿವೃದ್ಧಿ ಭಾಷಾ ಕಾರ್ಯಾಗಾರದಲ್ಲಿ ಬರವಣಿಗೆ ಕೌಶಲ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶದ್ಧ ಬರಹ ಬರೆಯುವ ಮೂಲಕ ಅಕ್ಷರಗಳನ್ನು ಸುಂದರವಾಗಿಸುವದಷ್ಟೇ ಅಲ್ಲ ಮನದಲ್ಲಿ ವಿಷಯ ನೆನಪು ಉಳಿಯುವಂತೆ ಆಗುತ್ತದೆ. ವೇಗದ ಜತೆಗೆ ಅರ್ಥ ಕೆಡದ ರೀತಿ ಬರೆಯಬೇಕು. ವಿವಿಧ ರೀತಿಯಲ್ಲಿ ಅಕ್ಷರಗಳ ಬರವಣಿಗೆಗಳು, ಅಲ್ಪವಿರಾಮ, ಪೂರ್ಣವಿರಾಮ, ಉದ್ಗಾರವಾಚಕ, ಪ್ರಶ್ನಾರ್ಥಕ ಚಿನ್ಹೆಗಳ ಬಳಕೆ ಎಲ್ಲಿ, ಹೇಗೆ, ಯಾವಾಗ ಬಳಸಬೇಕು ಮತ್ತು ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಉಚ್ಛಾರಗಳನ್ನು ಹೇಗೆ ಮಾಡಬೇಕು ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾ. ಶಿವಣ್ಣ ಕುರಿ ಮಾತನಾಡಿದರು.
ಪರಿಷತ್ತಿನ ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಡಾ. ಉಮೇಶ ಅರಹುಣಶಿ, ಪ್ರೊ. ನಾಗರಾಜ ಹಾವಿನಾಳ ಉಪಸ್ಥಿತರಿದ್ದರು. ಡಾ. ರಾಜಶೇಖರ ದಾನರಡ್ಡಿ ಪ್ರಾಸ್ತಾವಿಕವಾಗಿ    ಮಾತನಾಡಿದರು.
ಪ್ರೊ. ಎಚ್.ಎಸ್. ಚಂದ್ರಪ್ಪ ಸ್ವಾಗತಿಸಿದರು. ಪ್ರೊ. ಆರ್.ಪಿ. ನದಾಫ್ ವಂದಿಸಿದರು. ಪ್ರೊ. ಅಣ್ಣಪ್ಪ ರೊಟ್ಟಿಗವಾಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement