ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಕಾರವೇ ಸಂಪತ್ತಿನ ಹೆಬ್ಬಾಗಿಲು: ಹಿರೇಮನಿ

Mainashree
Updated On : 10 Feb 2014, 1:57 am

ಗಜೇಂದ್ರಗಡ: ಸಹಕಾರವೇ ಸಂಪತ್ತಿನ ಹೆಬ್ಬಾಗಿಲು ಎನ್ನುವ ಸಹಕಾರಿ ಉಕ್ತಿಯನ್ನು ಎಲ್ಲ ಸಹಕಾರಿಗಳು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಲಕ್ಷ್ಮಿ ಅರ್ಬನ್ ಕೋ-ಆಫ್ ಬ್ಯಾಂಕ್ನ ಚೇರ್ಮನ್ ಸಂಗನಬಸಪ್ಪ ಹಿರೇಮನಿ ಹೇಳಿದರು.
ಬ್ಯಾಂಕ್ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ದಕ್ಷತೆ, ಪ್ರಾಮಾಣಿಕ ಸೇವೆಯ ಮೂಲಕ ಪಟ್ಟಣ ಜನರ ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿರುವ ಬ್ಯಾಂಕ್ ನೂರು ವರ್ಷ ದೀರ್ಘ ಕಾಲದ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿಯ ಜನತೆಗೆ ಹೆಮ್ಮೆಯ ತಂದಿದೆ. ಶತಮಾನೋತ್ಸವ ಆಚರಣೆ ಯಶಸ್ವಿಗೆ ಕಾರಣಿಕರ್ತರಾದ ಸರ್ವರಿಗೂ ಅದರ ಶ್ರೇಯಸ್ಸು ಸಲ್ಲುತ್ತದೆ. ಬ್ಯಾಂಕ್ ಶತಮಾನೋತ್ಸವ ಆಚರಣೆಯಿಂದ ಉಳಿದ ರು. 3.25 ಲಕ್ಷ ಹಣವನ್ನು ಠೇವಣಿ ಇಟ್ಟ ಬಡ್ಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನಗದು ಪಾರಿತೋಷಕ ವಿತರಿಸಲಾಗುವುದು ಎಂದರು.
ವ್ಯವಸ್ಥಾಪಕ ಆರ್.ಎಸ್. ಹೊಸಂಗಡಿ ಮಾತನಾಡಿ, ಬ್ಯಾಂಕ್ ಗ್ರಾಹಕರ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಚಿಕ್ಕ ವ್ಯಾಪಾರಸ್ಥರಿಗೆ, ಕುಶಲ ಕರ್ಮಿಗಳಿಗೆ, ಆರ್ಥಿಕ ದುರ್ಬಲ ವರ್ಗದವರಿಗೆ ಹೆಚ್ಚಿನ ಸೇವೆ ನೀಡಬೇಕೆಂಬ ಶ್ರೇಯೋಭಿಲಾಷೆ ಹೊಂದಲಾಗಿದೆ ಎಂದರು.
ಉಪಾಧ್ಯಕ್ಷ ಎಸ್.ಎಸ್. ಪಟ್ಟೇದ, ನಿರ್ದೇಶಕ ಪಿ.ಎಸ್. ಕಡ್ಡಿ, ಡಾ. ಬಿ.ವಿ. ಕಂಬಳ್ಯಾಳ, ವೀರೇಶ ನಂದಿಹಾಳ, ಪಿ.ವೈ. ತಳವಾರ, ನೂತನ ಶಾಖೆ ವ್ಯವಸ್ಥಾಪಕ ಐ.ಕೆ. ಬೇಲೆರಿ ಎನ್.ಕೆ. ಹೊಸಂಗಡಿ, ವಿ.ಎಸ್. ಹೊನವಾಡ, ಮಂಜುನಾಥ ಮ್ಯಾಕಲ, ಎಂ.ಎಸ್. ಇಂಡಿ, ಜಗದೀಶ ಮಳಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement