ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಳ್ಳದ ನೀರು ಹರಿದು ಹೋಗುವಂತೆ ಮಾಡಿ

Mainashree
Updated On : 10 Feb 2014, 2:03 am

ಮುಂಡರಗಿ ಪಟ್ಟಣದಲ್ಲಿ ಶಿರಹಟ್ಟಿ ರಸ್ತೆಯಲ್ಲಿರುವ ಹಿರೇಹಳ್ಳದಲ್ಲಿ ಇಡೀ ಮುಂಡರಗಿ ಪಟ್ಟಣದಿಂದ ಹರಿದು ಬರುವ ಎಲ್ಲ ಚರಂಡಿಗಳ ನೀರು ಬಂದು ಜಮಾವಣೆಗೊಳ್ಳುವುದರಿಂದ ಈ ಹಳ್ಳದ ಅಕ್ಕಪಕ್ಕದಲ್ಲಿ ವಾಸಿಸುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಇಡೀ ಪಟ್ಟಣದಿಂದ ಹರಿದು ಬರುವ ನೀರು ಮುಂದೆ ಹೋಗದೇ ನಿಂತಲ್ಲಿಯೇ ನಿಂತು ಗಬ್ಬುವಾಸನೆ ಬೀರುತ್ತಿದೆ. ಹಿರೇಹಳ್ಳದ ಸೇತುವೆಯ ಎಡ ಹಾಗೂ ಬಲ ಎರಡೂ ಭಾಗಗಳಲ್ಲಿಯೂ ಇಡೀ ಪಟ್ಟಣದಿಂದ ಬಂದ ಗಲೀಜು ನೀರು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಅನೇಕ ಕಸಗಳ ಅದರಲ್ಲಿಯೇ ನಿಂತು ಗಲೀಜು ನೀರು ಒಂದಿಷ್ಟೂ ಹರಿದು ಮುಂದೆ ಹೋಗದಂತೆ ಅಲ್ಲಿಯೇ ನಿಲ್ಲುತ್ತಿದೆ. ಅಕ್ಕಪಕ್ಕದಲ್ಲಿರುವ ಮನೆಗಳ ಸಾರ್ವಜನಿಕರು, ವಿವಿಧ ವ್ಯಾಪಾರಗಳ ಅಂಗಡಿಯವರು ಮತ್ತು ನಿತ್ಯ ಆಸ್ಪತ್ರೆ, ಗ್ಯಾರೇಜುಗಳಿಗೆ ಬರುವ ಸಾರ್ವಜನಿಕರು ಗಬ್ಬು ವಾಸನೆಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಈ ಹಳ್ಳದಲ್ಲಿನ ಗಲೀಜು ನೀರು ನಿಂತ ಜಾಗೆಯಿಂದ ಹರಿದುಹೋಗುವಂತೆ ಪುರಸಭೆಯವರಾಗಲಿ ಅಥವಾ ಸಂಬಂಧಪಟ್ಟವರಾಗಲಿ ಕ್ರಮತೆಗೆದುಕೊಂಡು ಸಾರ್ವಜನಿಕರಿಗಾಗುವ ತೊಂದರೆಯನ್ನು ತಪ್ಪಿಸಬೇಕು.
-ಮಂಜುನಾಥ ಕಟ್ಟೀಮನಿ, ಅಧ್ಯಕ್ಷರು, ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ಮುಂಡರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement