ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

14ರಂದು ಆದಿಶಕ್ತಿ ರಥೋತ್ಸವ, ಸದಾಶಿವಾನಂದ ಗುರುಗಳ ಜಯಂತಿ

Mainashree
Updated On : 12 Feb 2014, 1:53 am

ಗದಗ: ಆದಿಶಕ್ತಿ ರಥೋತ್ಸವ ಹಾಗೂ ಸದಾಶಿವಾನಂದ ಗುರುಗಳ 117ನೇ ಜಯಂತ್ಯುತ್ಸವವನ್ನು ಫೆ. 14ರಂದು ಆಚರಿಸಲಾಗುತ್ತಿದೆ ಎಂದು ಶರಣೆ ನೀಲಮ್ಮತಾಯಿ ಹೇಳಿದರು. ಅವರು ಸೋಮವಾರ ನಗರದ ನೀಲಮ್ಮತಾಯಿ ಅಧ್ಯಾತ್ಮ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಜಾತ್ರೆಯ ಉತ್ಸವದಲ್ಲಿ ಜನರು ಭಕ್ತಭಾವದ ಸ್ಪಂದನೆ ಮೂಡಿಸಿ ಅಧ್ಯಾತ್ಮವನ್ನು ಜನರಿಗೆ ತಿಳಿಸುವ ಉದ್ದೇಶವೇ ಈ ಸತ್ಸಂಗವಾಗಿದೆ. ಫೆ. 14ರಂದು ಬೆಳಗ್ಗೆ 6ಕ್ಕೆ ಶ್ರೀದೇವಿಗೆ ಬಿಲ್ವಾರ್ಚನೆ, 8ಕ್ಕೆ ಬೆಳ್ಳಿ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ, 10ಕ್ಕೆ ಸತ್ಸಂಗ ಸಮ್ಮೇಳನ ಜರುಗಲಿದೆ. ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಗೋಕಾಕನ ಜಡಿಸಿದ್ಧೇಶ್ವರಮಠದ ಅಭಿನವ ಶಿವಾನಂದ ಶ್ರೀಗಳು, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತರಾದ್ಯ ದೇವರು, ದೆಹಲಿ ಬಸವಾಶ್ರಮದ ಮಹಾಂತ ದೇವರು, ಇಬ್ರಾಹಿಂಪುರನ ಸಂಪೂರ್ಣಾನಂದ ಶ್ರೀಗಳು ಉಪಸ್ಥಿತರಿರುವರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಿ.ಆರ್. ಪಾಟೀಲ, ವಾಣಿಜ್ಯ ಇಲಾಖೆ ಜಂಟಿನಿರ್ದೇಶಕ ಕೆ.ಐ. ಗುದಗಿ,  ನಗರಸಭೆ ಸದಸ್ಯ ಅನಿಲ ಗರಗ ಹಾಜರಿರುವರು. ಅಂದು ಸಂಜೆ 5ಕ್ಕೆ ಶ್ರೀದೇವಿ ರಥೋತ್ಸವ ಮತ್ತು ಮುತ್ತೈದೆಯರಿಂದ ಆರತಿ ಸೇವೆ ಜರುಗಲಿದೆ. 6.30ಕ್ಕೆ ಜಾನಪದ ಹಾಗೂ ಅನುಭಾವ ಚಿಂತನಗೋಷ್ಠಿ ಜರುಗಲಿದೆ. ಶಿವಶರಣೆ ನೀಲಮ್ಮ ತಾಯಿ ಸಾನ್ನಿಧ್ಯ ವಹಿಸುವರು. ರಾಣಿಬೆನ್ನೂರ ಸಿದ್ಧಾರೂಢಮಠದ ಈಶ್ವರಾನಂದ ಶ್ರೀಗಳು, ಅಡವೀಂದ್ರ ಸ್ವಾಮಿಮಠದ ಮಹೇಶ್ವರ ಶ್ರೀಗಳು ನೇತೃತ್ವ ವಹಿಸುವರು. ಕವಿತಾ ದಂಡಿನ ಅವರಿಂದ ಉಪನ್ಯಾಸ ಜರುಗಲಿದೆ. ಕೊತಬಾಳದ ಅರಣೋದಯ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ದ್ರಾಕ್ಷಾಯಣಿ ಸಂಕೇಶ್ವರ, ಡಾ. ರಾಜೇಶ್ವರ ಕುರುಡಗಿ, ಡಾ. ವಾಣಿ ಶಿವಪುರ, ಗಿರಿಜಾದೇವಿ ಹಿರೇಮಠ, ಕಸ್ತೂರಿಬಾಯಿ ಹಿರೇಗೌಡ್ರ, ಶೋಭಾ ಬಿರಾದಾರ ಮುಂತಾದವರು ಉಪಸ್ಥಿತರಿರುವರು ಎಂದರು. ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ಆರ್.ವಿ. ಹಿರೇಮಠ, ಮೃತ್ಯುಂಜಯ ಸಂಕೇಶ್ವರ, ನಗರಸಭೆ ಸದಸ್ಯ ಅನೀಲ ಗರಗ, ಬಿ.ಬಿ. ಹೂಗಾರ, ಬಾವಿಕಟ್ಟಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement