ಗಮನ ಸಳೆದ ಎರಡು ಮಕ್ಕಳ ಸೂತ್ರ
ಜಿಲ್ಲಾ ಆರೋಗ್ಯ ಇಲಾಖೆಯು ಎರಡು ಮಕ್ಕಳ ಸೂತ್ರ ಎನ್ನುವ ಯೋಜನೆ ರೂಪಿಸಿದೆ. ಆದರೆ, ವೈದ್ಯರು ಕೊರತೆ ಇರುವ ಹಿನ್ನೆಲೆಯಲ್ಲಿ ಸಾಧನೆ ಸಾಧ್ಯವಾಗಿಲ್ಲ ಎನ್ನುವ ಡಿಎಚ್ಒ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಎರಡು ಮಕ್ಕಳ ಸೂತ್ರ ಕೇವಲ ಕಾಗದದಲ್ಲಿದೆ. ಜನಸಂಖ್ಯೆ ತೀವ್ರವಾಗಿ ಬೆಳೆಯಲು ಡಿಎಚ್ಒ ಅವರ ನಿರ್ಲಕ್ಷ್ಯವೂ ಕಾರಣ ಎಂದಾಗ ಸಭೆಯಲ್ಲಿ ನಗೆ ಮೂಡಿತು. ಮಧ್ಯೆ ಪ್ರವೇಶಿಸಿದ ಸಿಇಒ ನೀವು ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿದ್ದೀರಿ, ಇದರಲ್ಲಿ ನಿಮ್ಮ ಜವಾಬ್ದಾರಿಯೂ ಇದೆ ಎಂದರು. ಒಟ್ಟಿನಲ್ಲಿ ಜಿಲ್ಲೆಯ ಜನಸಂಖ್ಯೆ ಹೆಚ್ಚಾಗಲು ನಾವೇ ಕಾರಣವೇ ಎನ್ನುವ ಮರು ಪ್ರಶ್ನೆ ಬರುತ್ತಿದ್ದಂತೆ ಸಭೆ ಮತ್ತಷ್ಟು ನಗೆಯಲ್ಲಿ ಮುಳುಗಿತು.