ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವಾನುಭ ಕಾರ್ಯಕ್ರಮ

Mainashree
Updated On : 12 Feb 2014, 1:53 am

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ದೊರೆಸ್ವಾಮಿ ವಿರಕ್ತಮಠದಲ್ಲಿ ಫೆ. 13ರ ಸಂಜೆ 7.30ಕ್ಕೆ 223ನೇ ಮಾಸಿಕ ಶಿವಾನುಭವ ಜರಗಲಿದೆ. ಈ ಕಾರ್ಯಕ್ರಮಕ್ಕೆ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಹೆಬ್ಬಾಳ ವೀರೇಶ್ವರ ದೇವರ, ಉಪನ್ಯಾಸಕ ಶ್ರೀಕಾಂತ ಹುಲಮನಿ, ಆರ್.ಬಿ. ಚಿನಿವಾಲರ, ಎಚ್.ವಿ. ಕಣವಿ, ಪ್ರಕಾಶ ಚಂದನ್ನವರ, ವಿದ್ಯಾ ಮುದ್ದನಗೌಡ್ರ, ನಾಗರತ್ನ ಮುದ್ದನಗೌಡ್ರ, ನಾಗರತ್ನ ಕುಳ್ಳೂರ ಮುಂತಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನೀರು ನಿರ್ವಹಣೆ ಉಪನ್ಯಾಸ
ನರಗುಂದ: ತಾಲೂಕಿನ ಜಗಾಪುರ ಗ್ರಾಮದ ಮಾರುತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಫೆ. 13ರಂದು ಬೆಳಗ್ಗೆ 10.30ಕ್ಕೆ ಕೃಷಿ ವಿಶ್ವವಿದ್ಯಾಲಯದ ನೀರು ನಿರ್ವಹಣೆ ಸಂಶೋಧನ ಕೇಂದ್ರ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಣ್ಣು ಮತ್ತು ನೀರು ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮ ಜರಗಲಿದೆಯ ಈ ಕಾರ್ಯಕ್ರಮಕ್ಕೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಭಾಗವಹಿಸವರು ತಾಲೂಕಿನ ರೈತ ಬಾಂಧವರು ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ಎಸ್.ಎಂ. ಕೃಷ್ಣಾನಗರ ಪೂರ್ಣ ಭಾಗ, ಆದಿಶಕ್ತಿ ಗುಡಿ ಸುತ್ತ, ಹುಬ್ಬಳ್ಳಿಮಠ ಬಾವಿಯ ಸುತ್ತಮುತ್ತ, ಚಾಮುಂಡೇಶ್ವರಿ ಗುಡಿಯ ಭಾಗ, 12 ನಂಬರ್ ಶಾಲೆಯ ಸುತ್ತಮುತ್ತಲ ಭಾಗ, ಕ್ರಿಶ್ಚಿಯನ್ ಕಾಲೋನಿ, 3ನೇ ವಾರ್ಡ್ನಲ್ಲಿನ ರೇವಿಂಗ್ಟನ್ ರೋಡ್, ಹುಯಿಲಗೋಳ ರಸ್ತೆ, ಜಾನಿಸಾಬ ಮಸೀದಿ ರಸ್ತೆ, ಮಲ್ಲಿಕಾರ್ಜುನ ರಸ್ತೆ, ಬಣ್ಣದ ನಗರ, ಶರಣಬಸವೇಶ್ವರ ಗುಡಿ ರಸ್ತೆ, ಕಬಾಡಿ ರಸ್ತೆ, ಕಲಬುರ್ಗಿ ಓಣಿ, ಕರಿಸಿದ್ದಿಮಠ ಓಣಿಯ ಕೆಲವು ಭಾಗಗಳಲ್ಲಿ ಬುಧವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement