ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೃತರ ಕುಟುಂಬಕ್ಕೆ ರು. 1 ಲಕ್ಷ: ಎಚ್.ಕೆ. ಪಾಟೀಲ ಘೋಷಣೆ

Lingaraj Badiger
Updated On : 13 Feb 2014, 11:10 am

ಗದಗ: ಬುಧವಾರ ಬೆಳಗ್ಗೆ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ಮದುವೆ ದಿಬ್ಬಣದ ಜನರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸಾಂತ್ವನ ಹೇಳಿದರು. ಈ ಸಂದರ್ಭ ಮೃತರ ಕುಟುಂಬಕ್ಕೆ ತಲಾ ರು. 1 ಲಕ್ಷ ಹಾಗೂ ಗಾಯಾಳುಗಳಿಗೆ ರು. 25 ಸಾವಿರ ಪರಿಹಾರ ಘೋಷಿಸಿದರು. ಮೃತರ ಶವಗಳ ವಿಲೇವಾರಿ ಹಾಗೂ ಅಂತ್ಯಕ್ರಿಯೆ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು. ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಡಾ. ಆರ್.ಎನ್. ಪಾಟೀಲ, ಅಶೋಕ ಮಂದಾಲಿ, ಊಮರಪಾರುಕ್ ಹುಬ್ಬಳ್ಳಿ, ಅಂದಪ್ಪ ದ್ವಾಸಲ್, ಅನೀಲ ಶಿಂಗ್ಟಾಲಕೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement